
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷ ಹಾಗೂ ಸಾಮಾಜಿಕ ಚಿಂತಕರಾಗಿದ್ದ ರಮಾನಂದ ನಾಯಕರ ನಿಧನಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಕೀಯದ ಜೊತೆಯಲ್ಲಿ ಸಾಮಾಜಿಕ ಹೋರಾಟದ ಬದುಕನ್ನು ಕಟ್ಟಿಕೊಂಡ ರಮಾನಂದ ನಾಯಕರವರ ಜೀವನ ಆದರ್ಶಮಯ . ಕಳಂಕ ರಹಿತ ರಾಜಕೀಯ ಜೀವನವೂ ಇಂದು ಆದರ್ಶಮಯ ಎಂದರೆ ತಪ್ಪಾಗಲಾರದು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಜ್ವಲಂತ ಸ್ವಮಸ್ಯೆಗಳಲ್ಲಿ ಒಂದಾದ ಅರಣ್ಯ ಭೂಮಿ ಹಕ್ಕಿನ ಹೋರಾಟದಲ್ಲಿ ಅರಣ್ಯವಾಸಿಗಳೊಂದಿಗಿದ್ದು, ಸಮಸ್ಯೆಗೆ ಸಂಘಟನೆ, ಹೋರಾಟ, ಹಾಗೂ ಅರಣ್ಯವಾಸಿಗಳ ಪಾದಯಾತ್ರೆ ಸಂದರ್ಭದಲ್ಲಿ ಹೋರಾಟಗಾರರೊಂದಿಗೆ ಹಾಕಿದ ಹೆಜ್ಜೆಗಳು ವಿಶೇಷವೆಂದರೆ ತಪ್ಪಾಗಲಾರದು ಎಂದು ರವೀಂದ್ರ ತಿಳಿಸಿದ್ದಾರೆ.
ಇವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ದುಖಃ ಭರಿಸುವ ಶಕ್ತಿ ನೀಡಲೆಂದು ಅವರು ಪ್ರಾರ್ಥಿಸಿದ್ದಾರೆ.




