Kannada NewsKarnataka NewsLatest

*ನವೋದಯ ಆಸ್ಪತ್ರೆ ಡಾಕ್ಟರ್ ಆತ್ಮಹತ್ಯೆ ಬೆನ್ನಲ್ಲೇ ನರ್ಸ್ ಕೂಡ ನೇಣಿಗೆ ಶರಣು*

ಪ್ರಗತಿವಾಹಿನಿ ಸುದ್ದಿ: ನವೋದಯ ಆಸ್ಪತ್ರೆಯ ವೈದ್ಯ ಡಾ.ಚೇತನ್ ಟೆಂಕರ್ ಆತ್ಮಹತ್ಯೆಗೆ ಶರಣಾಗಿದ್ದ ಬೆನ್ನಲ್ಲೇ ಇದೀಗ ನರ್ಸ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Home add -Advt

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಮಹದೇಶ್ವರ ಬಡವಾಣೆಯಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ನವೋದಯ ಆಸ್ಪತ್ರೆಯ ನರ್ಸ್ ಸರಸ್ವತಿ (45) ಆತ್ಮಹತ್ಯೆಗೆ ಶರಣಾದವರು.

ಎರಡು ದಿನಗಳ ಹಿಂದೆ ನವೋದಯ ಆಸ್ಪತ್ರೆಯ ವೈದ್ಯ ಡಾ.ಚೇತನ್ ಟೆಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ವೈದೈನ ಸಾವಿನ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಇದೀಗ ಅದೇ ಆಸ್ಪತ್ರೆಯ ನರ್ಸ್ ನೇಣಿಗೆ ಶರಣಾಗಿದ್ದಾರೆ.

ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button