Film & EntertainmentKannada NewsLatest

*ಕಾರು-ಟ್ರಕ್ ಭೀಕರ ಅಪಘಾತ: ಖ್ಯಾತ ನಟ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ ಭರತ್ ಕಾಂತ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.

ಹೈದರಾಬಾದ್‌ ನ ಆದಿಬಟ್ಲಾ ಹೊರ ವರ್ತುಲ ರಸ್ತೆಯಲ್ಲಿರುವ ನಿರ್ಗಮನ ಸಂಖ್ಯೆ 12ರ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿನಟ ಭರತ್ ಕಾಂತ್ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭರತ್ ಜೊತೆ ಮೃತಪಟ್ಟಿರುವ ಒನ್ನೋರ್ವನ ಗುರುತು ಪತ್ತೆಯಾಗಿಲ್ಲ.

Home add -Advt

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ನಟ ಭರತ್, ತೆಲುಗಿನ ಸಿನಿಮಾ ಹಾಗೂ ವೆಬ್ ಸಿರೀಸ್ ಗಳಲ್ಲಿಯೂ ಅಭಿನಯಿಸಿದ್ದರು. ಗ್ರಾಮಂ ಮತ್ತು 2024ರಲ್ಲಿ ಬಿಡುಗಡೆಗೊಂಡ ಟೆನೆಂಟ್ ಭರತ್ ಕಾಂತ್ ಅವರು ನಟಿಸಿದ ಪ್ರಮುಖ ಚಿತ್ರಗಳಾಗಿವೆ. ಗೀತಾಂಜಲಿ ಮತ್ತು ಪಾರ್ವತಿ ಪರಮೇಶ್ವರ್ಲು ಎಂಬ ವೆಬ್ ಸರಣಿಗಳಲ್ಲಿಯೂ ಅವರು ಅಭಿನಯಿಸಿದ್ದರು.


Related Articles

Back to top button