Belagavi NewsBelgaum NewsKannada NewsKarnataka NewsLatest

*ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸ್ ಹತ್ತುವಾಗ, ಇಳಿಯುವಾಗ ಉಂಟಾಗುವ ಜನಜಂಗುಳಿಯ ಲಾಭ ಪಡೆದು ಚಿನ್ನಾಭರಣ ಎಗರಿಸುತ್ತಿದ್ದ  ಅಂತಾರಾಜ್ಯ ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂಧಿತರನ್ನು ಮಹಾರಾಷ್ಟ್ರ ಮೂಲದ ಹೇಮಾ ಕಸಬೇಕರ ಹಾಗೂ ನಿಲಂ ಕಾಂಬಳೆ ಎಂದು ಗುರುತಿಸಲಾಗಿದೆ. ಅಥಣಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಕಳ್ಳಿಯರು ಮಹಿಳೆಯರು ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. 

ತದನಂತರ ನಡೆದ ತೀವ್ರ ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ನಡೆಸಿರುವ ಸರಣಿ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ. ವಿವಿಧ ಕಡೆಗಳಲ್ಲಿ ಈ ಇಬ್ಬರು ಮಹಿಳೆಯರು ಭಾಗಿಯಾಗಿದ್ದ ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳು ಸದ್ಯ ಬಯಲಾಗಿವೆ. 

ಬಂಧಿತರಿಂದ ಸುಮಾರು 68 ಲಕ್ಷ ರೂಪಾಯಿ ಒಟ್ಟು ಮೌಲ್ಯದ 42.5 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. 

Home add -Advt

ಕಳ್ಳಿಯರು ಬಸ್ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಓಡಾಡುತ್ತಿದ್ದರು. ಬಸ್ ಬಂದು ನಿಂತಾಗ ಜನರು ಒಮ್ಮೆಲೇ ಹತ್ತುವ ಮತ್ತು ಇಳಿಯುವ ಸಮಯದಲ್ಲಿ ಉಂಟಾಗುವ ಗದ್ದಲ, ಜನದಟ್ಟಣೆ ಹಾಗೂ ತಳ್ಳಾಟವನ್ನೇ ಕಾಯುತ್ತಿದ್ದರು. ಇದನ್ನೇ ಆಸರೆಯಾಗಿಸಿಕೊಂಡು ಮಹಿಳಾ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ, ಯಾರಿಗೂ ಸಂಶಯ ಬಾರದಂತೆ ಕ್ಷಣಾರ್ಧದಲ್ಲಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಬ್ಯಾಗ್‌ಗಳಲ್ಲಿದ್ದ ಒಡವೆಗಳನ್ನು ದೋಚುತ್ತಿದ್ದರು.

ಯಾರಿಗೂ ಅನುಮಾನ ಬಾರದಂತೆ ಸಭ್ಯ ಗೃಹಸ್ಥರಂತೆ ಬಂದು ಕೈಚಳಕ ತೋರುತ್ತಿದ್ದ ಈ ಅಂತರರಾಜ್ಯ ಮಹಿಳಾ ಕಳ್ಳಿಯರು ಸಿಕ್ಕಿಬಿದ್ದಿರುವುದರಿಂದ ಸಾರ್ವಜನಿಕರು ಹಾಗೂ ಮಹಿಳಾ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. 

ಅಥಣಿ ಪೊಲೀಸರ ಸಮಯಪ್ರಜ್ಞೆ ಮತ್ತು ದಕ್ಷತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Related Articles

Back to top button