
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನಾತ್ಮಕ ಶಿಸ್ತು ಮತ್ತು ಕಸುವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತೀಯ ಯುವ ಕಾಂಗ್ರೆಸ್ ಹೈಕಮಾಂಡ್ 15 ಪ್ರಮುಖ ಪದಾಧಿಕಾರಿಗಳನ್ನು ವಜಾಗೊಳಿಸಿದೆ.
ಪಕ್ಷದ ಚಟುವಟಿಕೆಗಳಲ್ಲಿ ದೀರ್ಘಕಾಲದ ನಿಷ್ಕ್ರಿಯತೆ ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಒಟ್ಟು 15 ಪ್ರಮುಖ ಪದಾಧಿಕಾರಿಗಳನ್ನು ಅವರ ಸ್ಥಾನ ಮತ್ತು ಜವಾಬ್ದಾರಿಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಮುಕ್ತಗೊಳಿಸಿ ಆದೇಶ ಹೊರಡಿಸಲಾಗಿದೆ.
15 ಪದಾಧಿಕಾರಿಗಳು ಕಳೆದ ಕೆಲವು ಸಮಯದಿಂದ ಸಂಘಟನಾತ್ಮಕ ಕೆಲಸಗಳಿಂದ ಸಂಪೂರ್ಣ ದೂರವುಳಿದಿದ್ದರು ಮತ್ತು ಸಭೆಗಳಿಗೆ ಗೈರಾಗುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು ಎಂಬುದು ಹೈಕಮಾಂಡ್ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸಂಘಟನೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಜವಾಬ್ದಾರಿಯಿಂದ ಮುಕ್ತಗೊಳಿಸಲಾದ ಪದಾಧಿಕಾರಿಗಳ ಪಟ್ಟಿ
- ದೀಪಿಕಾ ರೆಡ್ಡಿ, ರಾಜ್ಯ ಉಪಾಧ್ಯಕ್ಷರು
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
- ಸಿ.ಎಸ್. ಫ್ರಾನ್ಸಿಸ್ ಬೆನಿಟೊ,
- ಬಿಂದು ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು
- ಸುಮನ್ ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು
- ಅಫ್ನಾನಖಾನಂ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು
- ಲಕ್ಷ್ಮಿ ಕೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು
- ವಾಣಿ ಕಾಂಬ್ಳೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು
- ದಕ್ಷಿಣಮೂರ್ತಿ ಎಸ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ರಾಜ್ಯ ಕಾರ್ಯದರ್ಶಿಗಳು
- ಅಬ್ದುಲ್ ರವೂಫ್ ಬಿ.ಎಂ.
- ಸೈಯದ್ ಹುಸೇನ್ ಖಾದ್ರಿ
- ಮೊಹಮ್ಮದ್ ಆಸಿಫ್ ಹುಸೇನ್
- ಎಸ್.ಆರ್.ಎಸ್ ಚಂದ್ ಬಾಷಾ
- ಗೋವರ್ಧನ್ ಜಿ.ಸಿ.
- ಪವನ್ ಸಾಲಿಯಾನ್
- ನವೀನ್ ಕುಮಾರ್ ಎಸ್.
ಭಾರತೀಯ ಯುವ ಕಾಂಗ್ರೆಸ್ನ ಪ್ರಮುಖ ನಾಯಕರಾದ ನಿಗಮ್ ಭಂಡಾರಿ, ಶ್ರೀನಿವಾಸ್ ರಾಥೋಡ್, ತಾರಿಖ್ ಬಾಗ್ವಾನ್ ಮತ್ತು ಮಂಜುನಾಥ್ ಎಚ್.ಎಸ್. ಅವರು ಜಂಟಿಯಾಗಿ ಈ ಆದೇಶದ ಪತ್ರಕ್ಕೆ ಸಹಿ ಹಾಕಿದ್ದಾರೆ.


