Kannada NewsKarnataka NewsNational

*ಹೊತ್ತಿ ಉರಿದ ಪ್ಯಾಸೆಂಜರ್ ರೈಲು*

ಪ್ರಗತಿವಾಹಿನಿ ಸುದ್ದಿ: ಪ್ಯಾಸೆಂಜರ್ ರೈಲೊಂದು ಹೊತ್ತಿ ಉರಿದಿದೆ. ಬೆಂಕಿಯ ತೀವ್ರತೆಗೆ ಕೆಲವು ಬೋಗಿಗಳು ಸುಟ್ಟುಹೋಗಿದ್ದು, ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. 

ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ನಡೆದಿದೆ.ಈ ರೈಲು ಪಾಟ್ನಾಗೆ ತೆರಳಲು ಸಜ್ಜಾಗಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರು ದಟ್ಟವಾದ ಬೆಂಕಿಯನ್ನು ಕಂಡು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ಅಗ್ನಿ ಅವಘಡಕ್ಕೆ  ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಕೋಚ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button