Kannada NewsNationalPoliticsTravel

*ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ತೈಲ ಬೆಲೆ ಇಂದು ಮತ್ತೊಮ್ಮೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ತೈಲ ಕಂಪನಿಗಳು ಒಟ್ಟು ಮೂರು ಬಾರಿ ಬೆಲೆ ಹೆಚ್ಚಳ ಮಾಡಿದ್ದು ಸಾರ್ವಜನಿಕರಿಗೆ ಮತ್ತೆ ಶಾಕ್ ನೀಡಿದೆ.

ಶನಿವಾರ ದೇಶಾದ್ಯಂತ ಪೆಟ್ರೋಲ್ ದರದಲ್ಲಿ 87 ಪೈಸೆ ಮತ್ತು ಡೀಸೆಲ್ ದರದಲ್ಲಿ 91 ಪೈಸೆ ಏರಿಕೆ ಮಾಡಲಾಗಿದೆ. ಹೊಸ ದರ ಜಾರಿಗೆ ಬಂದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99.51 ರೂಪಾಯಿ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 92.49 ರೂಪಾಯಿಗೆ ಬಂದು ನಿಂತಿದೆ. 

ಕಳೆದ ಮೇ 15 ರಂದು ತೈಲ ಕಂಪನಿಗಳು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬರೋಬ್ಬರಿ 3 ರೂಪಾಯಿಗಳಷ್ಟು ಹೆಚ್ಚಳ ಮಾಡಿದ್ದವು. ಬಳಿಕ ಮೇ 19 ರಂದು ಮತ್ತೆ 90 ಪೈಸೆ ಏರಿಸಲಾಯಿತು. ಇದೀಗ ಶನಿವಾರದ ಏರಿಕೆಯನ್ನೂ ಸೇರಿಸಿಕೊಂಡರೆ ಕಳೆದ ಹತ್ತು ದಿನಗಳಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಸರಿಸುಮಾರು 5 ರೂಪಾಯಿಗಳಷ್ಟು ದುಬಾರಿಯಾದಂತಾಗಿದೆ.

Related Articles

Back to top button