Karnataka NewsLatestPolitics

*ಸಂಸದೆ ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆಗೆ ವಿವಾದಾತ್ಮಕ ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರು*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಸ್ಟರ್ ವಾರ್ ಮುಂದುವರೆದಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್‌ನವರು ದೇಶಕ್ಕಾಗಿ ಹುಟ್ಟಿದವರು, ಬಿಜೆಪಿ ದ್ವೇಷಕ್ಕಾಗಿ ಹುಟ್ಟಿದವರು” ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ, “ಕಾಂಗ್ರೆಸ್ ಮಕ್ಕಳು ಗಾಂಧೀಜಿ ಮಕ್ಕಳು, ವಿಜಯೇಂದ್ರನ ಮಕ್ಕಳು ಕಳ್ನ ಮಕ್ಕಳು” ಎಂದು ಕಟುವಾಗಿ ನಿಂದಿಸಿ ಬರೆಯಲಾದ ಪೋಸ್ಟರ್‌ಗಳನ್ನು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಅಂಟಿಸಲಾಗಿದೆ.

ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಮಲ ಹಾಗೂ ಕೈ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಬಗ್ಗೆ ಪೋಸ್ಟರ್ ಅಂಟಿಸಿದ ವಿಚಾರವಾಗಿ ಬೆಂಗಳೂರಿಮಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು, ಇದೀಗ ಬಿಜೆಪಿ ನಾಯಕರ ಮನೆ ಮುಂದೆ ಪೋಸ್ಟರ್ ಗಳು ರಾರಾಜಿಸುತ್ತಿವೆ.

Related Articles

Back to top button