Belagavi NewsBelgaum NewsKannada NewsKarnataka News

*ನಾಳೆ ಬೆಳಗಾವಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗುಮ್ಮಟಮಾಳದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವದರಿಂದ ಮೇ. 27 2026 ರಂದು ಬೆಳಗಾವಿ ನಗರ ದಕ್ಷಿಣ ಭಾಗದ ಪ್ರಾತ್ಯಕ್ಷಿಕ ವಲಯ ಸೇರಿದಂತೆ ಕೆಲವು ಭಾಗಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.

ನೀರು ವ್ಯತ್ಯಯವಾಗುವ ಪ್ರದೇಶಗಳು: 

ಪ್ರಾತ್ಯಕ್ಷಿಕ ವಲಯ, ಮಜಗಾಂವ, ಉದ್ಯಮಭಾಗ, ರಾಜಾರಾಮನಗರ, ಆರ್ ಸಿ ನಗರ ಹಂತ 1&2, ಟಿಳಕವಾಡಿ, ನಾನಾವಾಡಿ, ಹಿಂದವಾಡಿ, ಶಹಾಪೂರ, ಖಾಸಭಾಗ, ಹಳೆ ಬೆಳಗಾವಿ, ಪಾರಿಜಾತ ಕಾಲೋನಿ, ಓಂಕಾರ ನಗರ, ಅನಗೋಳ ಮತ್ತು ವಡಗಾಂವ. ಪ್ರದೇಶಗಳಲ್ಲಿ ನೀರು ಸರಬರಾಜುನಲ್ಲಿ ವ್ಯತ್ಯಯವಾಗಲಿದೆ. ಇಂತಹ ಅನಿವಾರ್ಯ ಸಮಯದಲ್ಲಿ ಸಾರ್ವಜನಿಕರು ಎಲ್ & ಟಿ ಯೊಂದಿಗೆ ಸಹಕರಿಸಲು ಯು.ಐ.ಡಿ.ಎಫ್.ಸಿ, ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button