Kannada NewsKarnataka NewsLatest

*ಹಣ್ಣು-ತರಕಾರಿಯಲ್ಲಿ ಅರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ*

ಹಣ್ಣಿನ ಕೆತ್ತನೆಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ ಕಲಾವಿದ ಪುನೀತ್

.
ಪ್ರಗತಿವಾಹಿನಿ ಸುದ್ದಿ: ಹಣ್ಣು-ತರಕಾರಿಗಳ ಅಲಂಕಾರಿಕ ಕೆತ್ತನೆ ಕಲೆಯಲ್ಲಿ ಅಪೂರ್ವ ಸಾಧನೆ ಮೆರೆದಿರುವ ಮಂಡ್ಯ ಜಿಲ್ಲೆಯ ಯುವ ಪ್ರತಿಭೆ ಪುನೀತ್. ಜೆ ಅವರು ಇಂದು ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಲಾತ್ಮಕ ಹಣ್ಣಿನ ಕೆತ್ತನೆಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಜರ್ಮನಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಕ್ಯೂಲಿನರಿ ಒಲಂಪಿಕ್ಸ್-2024’ರ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ರಾಜ್ಯದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿರುವ ಅವರ ಸಾಧನೆಯನ್ನು ಶ್ಲಾಘಿಸಿದರು.

ಅವರ ಅದ್ಭುತ ಸೃಜನಶೀಲತೆ, ಪರಿಶ್ರಮ ಮತ್ತು ಕಲೆಯ ಮೇಲಿನ ಅಪಾರ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಈ ವಿಶಿಷ್ಟ ಕಲೆಯ ಬೆಳವಣಿಗೆ ಹಾಗೂ ಪ್ರೋತ್ಸಾಹಕ್ಕಾಗಿ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ನೀಡುವ ಭರವಸೆ ನೀಡಿದರು.

Home add -Advt

Related Articles

Back to top button