*ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೇಲ್ದರ್ಜೆಗೆ: ವೆಂಕಟೇಶ ಪ್ರಸಾದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಧ್ಯಕ್ಷ ವೆಂಕಟೇಶ ಪ್ರಸಾದ ಅವರು ತಿಳಿದರು.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ 32 ಸಾವಿರ ಜನರ ಸಾಮರ್ಥ್ಯ ಇದೆ. ಗ್ರೌಂಡ್ ನಲ್ಲಿ 360 ಡಿಗ್ರಿ ನೋಡಲು ಆಗಲ್ಲ. 27 ಸಾವಿರ ಜನರಿಗೆ ಮಾತ್ರ ನೋಡಲು ಅವಕಾಶ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದ ಅಪ್ ಡೆಟ್ ಮಾಡಲು ಸಿದ್ದತೆ ಮಾಡುತ್ತಿದ್ದೇವೆ. ಇನ್ನೂ ಅನೇಕ ತಯಾರಿ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರದಿಂದ ಬೆಂಬಲ ಸಹ ಬೇಕಿದೆ. ಸರ್ಕಾರದ ಸಂಪೂರ್ಣ ಬೆಂಬಲ ಸಿಕ್ಕಿದೆ. ಅಕ್ಟೋಬರ್ ಒನ್ ಡೇ, ಡಿಸೆಂಬರ್ ನಲ್ಲಿ ಟಿ20 ಮ್ಯಾಚ್ ಬರಲಿದೆ ಎಂದು ತಿಳಿಸಿದರು.
ಪತ್ರಕರ್ತರ ಪ್ರಶ್ನೆಗೆ ಗರಂ ಆದ ವೆಂಕಟೇಶ ಪ್ರಸಾದ್
ಬೆಳಗಾವಿ ಕ್ರಿಕೆಟ್ ಸ್ಟೆಡಿಯಂ ಸಂಬಂಧ ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಕೆ ಎಸ್ ಸಿ ಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಗರಂ ಆಗಿದ್ದಾರೆ.
ಹುಬ್ಬಳ್ಳಿಯಲ್ಲಿ ರಣಜಿ ಪೈನಲ್ ಆಡಿಸಿದ್ದೇವೆ. ಯಾವುದೇ ರೀತಿಯಲ್ಲಿ ಕಲಬುರಗಿ, ರಾಯಚೂರು ಬೇಧಬಾವ ಮಾಡಿಲ್ಲ. ಖಂಡಿತ ಮುಂದಿನ ದಿನಗಳಲ್ಲಿ ಬೆಳಗಾವಿಗೆ ಮ್ಯಾಚ್ ಬರುತ್ತೆ. ನಿಮ್ಮ ಪ್ರಶ್ನೆಯನ್ನು ಈ ಹಿಂದೆ ಇದ್ದ ಆಡಳಿತ ಮಂಡಳಿಗೆ ಕೇಳಬೇಕಿತ್ತು. ಬೆಳಗಾವಿಯಲ್ಲಿ ಇಂಟರ್ ನ್ಯಾಶನಲ್ ಮ್ಯಾಚ್ ಆಡೋ ಹಾಗೇ ಮಾಡೋಕೆ ಆಗಲ್ಲ. ಪ್ರಾಕ್ಟಿಸ್ ಮ್ಯಾಚ್ ಆಡೋ ರೀತಿಯಲ್ಲಿ ಮಾಡಬಹುದು. ಬಿಸಿಸಿಐ ಡೊಮೆಸ್ಟಿಕ್ ಮ್ಯಾಚ್ ಆಡಿಸಬಹುದು ಎಂದರು.
ಮಹಾರಾಜ್ ಪಂದ್ಯಾವಳಿ ಲಾಂಚ್ ಮಾಡಿದ್ದೇವೆ. ದ್ರಾವಿಡ್, ಕುಂಬ್ಳೆ ಸಹ ಪಾಲ್ಗೊಂಡಿದ್ದರು. ಮಹಾರಾಜ್ ಟ್ರೋಫಿಗೆ ಇನ್ನಷ್ಟು ಹೆಚ್ಚು ತಂಡಗಳು ಆ್ಯಡ್ ಮಾಡಬಹುದು. ಹುಬ್ಬಳ್ಳಿ ಮಣ್ಣಿಮ ಮಗ ಅವಿನಾಶ ವೈದ್ಯ ಬಿಸಿಸಿಐಗೆ ಮ್ಯಾನೆಜರ್ ಆಗಿ ಆಯ್ಕೆಯಾಗಿದ್ದಾರೆ ಎಂದರು.



