Belagavi NewsBelgaum NewsKannada NewsKarnataka NewsPolitics

*ಎಂಇಎಸ್ ನಿಷೇಧಕ್ಕೆ ಕರವೇ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡದ ನೆಲದಲ್ಲೇ ಇದ್ದು ಕನ್ನಡದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಿರುವ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ಶಾಶ್ವತವಾಗಿ ನಿಷೇಧಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಇಂದು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ನಾಡದ್ರೋಹಿ ಎಂ.ಇ.ಎಸ್‌  ಸಂಘಟನೆಯನ್ನು ರಾಜ್ಯದಲ್ಲಿ ಶಾಶ್ವತವಾಗಿ ನಿಷೇಧಿಸಬೇಕು ಮತ್ತು ಅದರ ನಾಯಕರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಲಾಯಿತು..

Home add -Advt

ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಕನ್ನಡಿಗರು ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಕಾನೂನುಗಳನ್ನು ಗೌರವಿಸಿ, ಸ್ಥಳೀಯರೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ, ಕರ್ನಾಟಕದಲ್ಲೇ ನೆಲೆಸಿ, ಇಲ್ಲಿನ ಸಕಲ ಸೌಲಭ್ಯಗಳನ್ನು ಅನುಭವಿಸುತ್ತಿರುವ ಎಂ.ಇ.ಎಸ್ ನಾಯಕರು ಮಾತ್ರ ನಿರಂತರವಾಗಿ ಭಾಷಾ ಗಲಭೆಗಳನ್ನು ಸೃಷ್ಟಿಸುತ್ತಾ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಕರವೇ ನಾಯಕರು ಆಕ್ರೋಶ ಹೊರಹಾಕಿದರು.

ಈ ವೇಳೆ ಕರವೇ ರಾಜ್ಯ ಸಂಚಾಲಕ ಸುರೇಶ ಗವನ್ನವರ, ಉಪಾಧ್ಯಕ್ಷರು ಗಣೇಶ್ ರೋಕಡೆ ಹಾಗೂ ರಾಜು ನಾಶಿಪುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ, ಜಿಲ್ಲಾ ಸಂಚಾಲಕರಾದ ಹೊಳೆಪ್ಪ ಸುಳದಾಳ್, ಅಡಿವೆಪ್ಪ ತಲ್ಲೂರಿ, ಉದಯಕುಮಾರ್ ಚಿಕ್ಕನ್ನವರ, ಸುಧೀರಗೌಡ ಪಾಟೀಲ್, ಜಗದೀಶ್ ಮಾಳಗಿ, ಸತೀಶ್ ಗುಡದವರ, ಭೋಪಾಲ್ ಅತ್ತು, ರಮೇಶ್ ಯರಗನ್ನವರ, ಸಂತೋಷ್ ಚಕ್ರಯಿ, ಮಂಜುನಾಥ್ ರಾಥೋಡ್, ಅರ್ಜುನ್ ಕಾಂಬಳೆ, ನಾಗರಾಜ್ ಲಕ್ಕಪಗೋಳ್, ಕರಣ್ ಚೌಹಾನ್, ಸಂಪತ ಸಕ್ರೆನ್ನವರ, ಬಸವರಾಜ್ ದಂಡನವರ, ಮಧು ಇಟಗಿ, ಶಾಂತಾ ಹಣಬರ, ರೇಖಾ ಲೋಕರಿ, ಮಹಾದೇವಿ ಕುರಬೇಟ ಹಾಗೂ ತೃಪ್ತಿ ಹಿರೇಮಠ ಸೇರಿದಂತೆ ಹಲವಾರು ಕರವೇ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button