Belagavi NewsBelgaum NewsKannada NewsKarnataka News
*ಬೆಳಗಾವಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಧನೆ: ಬಹುಮಾನ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವಿಭಾಗದ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್ ಗುಡೆನ್ನವರ ಇವರಿಗೆ ಇಂಧನ ಮೇಲಿನ ವೆಚ್ಚ ನಿಯಂತ್ರಿಸಿರುವುದಕ್ಕಾಗಿ ಬಹುಮಾನ ವಿತರಿಸಲಾಗಿರುತ್ತದೆ.
ವಾಹನಗಳ ಕೆ.ಎಂ.ಪಿ.ಎಲ್ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ” ಏಪ್ರೀಲ್ ಮತ್ತು ಮೇ-2026 ರ ಅವಧಿಯಲ್ಲಿ ಸಂಚಿತ ಕೆ.ಎಂ.ಪಿ.ಎಲ್ 5.03 ಸಾಧಿಸಿ ಕಳೆದ ಸಾಲಿಗೆ ಹೋಲಿಸಿದಾಗ, 0.12 ರಷ್ಟು ಹೆಚ್ಚಿನ ಕೆ.ಎಂ.ಪಿ.ಎಲ್ ಸಾಧನೆ ಮಾಡಿ ಒಟ್ಟಾರೆ 0.64 ಲಕ್ಷ ಲೀಟರ್ ಇಂಧನ ಉಳಿಸಿ, ರೂ.56.04 ಲಕ್ಷ ರಷ್ಟು ಉಳಿತಾಯ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ, ಬೆಳಗಾವಿ ವಿಭಾಗದ ಅಧಿಕಾರಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಛೇರಿಯಲ್ಲಿ ಜೂನ್ 23 2026 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ರವರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿರುತ್ತಾರೆ.

