Kannada NewsKarnataka NewsLatest

*ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬಿ.ಕಾಂ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.

ಅಭಿರಾಮ್ ವೆಂಕಟ್ರಮಣ ಹೆಗಡೆ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸಿದ್ದಾಪುರ ತಾಲೂಕಿನ ಕಾನಸೂರಿನ ಕಲಕಟ್ಟೆಯ ನಿವಾಸಿಯಾಗಿರುವ ಅಭಿರಾಮ್, ಉಡುಪಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ. ಇದ್ದಕ್ಕಿದ್ದಂತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಬಾರಿ ಪರೀಕ್ಷೆಯಲ್ಲಿ ನಾನು ಮೂರು ವಿಷಯದಲ್ಲಿ ಫೇಲ್ ಆಗುವ ಸಾಧ್ಯತೆ ಇದ್ದು, ಇದರಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ. ನನ್ನ ಭವಿಷ್ಯ ಮುಗಿದು ಹೋಗಿದೆ. ಇನ್ನು ನಾಅನು ಬದುಕಿದ್ದು ಪ್ರಯೋಜನವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

ಕೆಲ ದಿನಗಳ ಹಿಂದಷ್ಟೇ ತಂದೆಯೊಂದಿಗೆ ಉಡುಪಿಗೆ ಹೋಗಿ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿ ಬಂದಿದ್ದ. ರಿಸಲ್ಟ್ ಬರುವ ಮುನ್ನವೇ ಪರೀಕ್ಷೆಯಲ್ಲಿ ಫೇಲಾಗಬಹುದು ಎಂಬ ಭಯದಲ್ಲೇ ಮನೆಯಲ್ಲಿ ತನ್ನ ರೂಮಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ.

Home add -Advt

ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್ ಪೆಕ್ಟರ್ ಸೀತಾರಾಅಮ ಹಾಗೂ ಪಿಎಸ್ ಐ ಶಾಂತಿನಾಅಥ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button