CrimeKarnataka NewsLatest

*ಸಿನಿಮಾ ಕಥೆಯನ್ನೂ ಮೀರಿಸುವಂತಹ ಕ್ರೈಂ ಥಿಲ್ಲರ್: ಯುವತಿಯನ್ನು ಕಿಡ್ನ್ಯಾಪ್ ಮಾಡಿ ಚಾಕು ಇರಿದು ಕಾರಿನಲ್ಲಿ ಕುಳಿತು ಸ್ಫೋಟಿಸಿಕೊಂಡ ಯುವಕ*

ಪ್ರಗತಿವಾಹಿನಿ ಸುದ್ದಿ: ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಕ್ರೈಂ ಥಿಲ್ಲರ್ ಸ್ಟೋರಿ ತುಮಕೂರಿನಲ್ಲಿ ನಡೆದಿದೆ. ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಕರೆದೊಯ್ದಿದ್ದಲ್ಲದೇ ಆಕೆಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಬಳಿಕ ಕಾರಿನ ಸಮೇತ ಸ್ಫೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಈ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ ಕಾರು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವನು.

ನಾಗೇಂದ್ರ ಇಂದು ಬೆಳಿಗ್ಗೆ ಬೆಂಗಳೂರಿನ ಸಿದ್ದಪುರ ಠಾಣೆ ವ್ಯಾಪ್ತಿಯ ಯುವತಿಯ ಪಿಜಿ ಬಳಿ ಬಂದಿದ್ದ. ಅಲ್ಲಿಂದ ಯುವತಿಯನ್ನು ಕಾರಿನಲ್ಲಿ ಕಿಡ್ನ್ಯಾಅಪ್ ಮಾಡಿಕೊಂಡು ಹೋಗಿದ್ದಾನೆ. ಯುವತಿಯನ್ನು ಅಪಹಿಸಿಕೊಂಡು ಹೋಗಿರುವ ಬಗ್ಗೆ ಆಕೆಯ ಸ್ನೇಹಿತೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಳು.

ಇತ್ತ ತುಮಕೂರು ಮಾರ್ಗವಾಗಿ ಕಾರಿನಲ್ಲಿ ಯುವತಿಯನ್ನು ಕರೆದುತ್ತಿದ್ದಾಗ ಮಾರ್ಗ ಮಧ್ಯೆ ನಾಗೇಂದ್ರ ಹಾಗೂ ಯುವತಿ ನಡುವೆ ಜಗಳವಾಗಿತ್ತು. ಜಗಳದ ನಡುವೆ ಯುವತಿಗೆ ನಾಗೇಂದ್ರ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿಯುತ್ತಿದ್ದಂತೆ ಯುವತಿ ತಕ್ಷಣ ಕಾರಿನ ಡೋರ್ ತೆಗೆದು ಹೊರಗಿಳಿದಿದ್ದಾಳೆ.

Home add -Advt

ಯುವತಿ ಕಾರಿನಿಂದ ಇಳಿದಾಗ ಕಾರು ಚಾಲಕ ಆಕೆಯ ಸಹಾಯಕ್ಕೆಂದು ಕಾರಿನಿಂದ ಇಳಿದಿದ್ದಾನೆ. ಚಾಲಕ ಕಾರಿನಿಂದ ಇಳಿಯುತ್ತಿದ್ದಂತೆ ಕಾರಿನ ಡೋರ್ ಲಾಕ್ ಮಾಡಿಕೊಂಡ ನಾಗೇಂದ್ರ ಏಕಾಏಕಿ ಕಾರನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ನಡು ರಸ್ತೆಯಲ್ಲಿ ಹೊತ್ತಿನ್ ಉರಿದಿದೆ. ನಾಗೇಂದ್ರ ಕಾರಿನಲ್ಲಿ ಸುಟ್ಟು ಕರಕಲಾಗಿದ್ದಾನೆ.

ನಾಡಬಾಂಬ್ ಬಳಸಿ ಕಾರು ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದರಿ 48ರಲ್ಲಿ ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮತ್ತೊಂದು ಜೀವಂತ ಬಾಂಬ್ ಕೂಡ ಪತ್ತೆಯಾಗಿದೆ. ತನಿಖೆ ಮುಂದುವರೆದಿದೆ

Related Articles

Back to top button