
“ಭ್ರಷ್ಟಾಚಾರಕ್ಕೆ ಬಿಗ್ ಶಾಕ್! “
➡️ ಮಹಿಳಾ ಸಂಸದೆ ಹಿಂದ್ ಅಲ್-ಅಬ್ಬಾಸಿ ಮನೆ ಮೇಲೆ ರೇಡ್
➡️ ಸಿಕ್ಕಿದ್ದು 57 ಮಿಲಿಯನ್ ಡಾಲರ್ + 27 KG ಚಿನ್ನ
➡️ “ಗೋಲ್ಡ್ ಇನ್ನರ್ವೇರ್” ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
➡️ ಆದ್ರೆ ಸರ್ಕಾರದಿಂದ ಇದುವರೆಗೆ ಅಧಿಕೃತ ಕನ್ಫರ್ಮೇಷನ್ ಇಲ್ಲ
➡️ ಒಟ್ಟು 7 MP ಸೇರಿ 47 ಜನರ ಅರೆಸ್ಟ್. ಪ್ರಧಾನಿ ಅಲಿ ಅಲ್-ಜೈದಿ ಆ್ಯಕ್ಷನ್!
ಭ್ರಷ್ಟಾಚಾರದ ವಿರುದ್ಧ ಇರಾಕ್ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಹಿಳಾ ಸಂಸದೆ ಹಿಂದ್ ಅಲ್-ಅಬ್ಬಾಸಿ ಮನೆ ಮೇಲೆ ರೇಡ್. ಬರೋಬ್ಬರಿ 57 ಮಿಲಿಯನ್ ಡಾಲರ್ ನಗದು, 27 ಕೆಜಿ ಚಿನ್ನ! ಸಾಮಾಜಿಕ ಜಾಲತಾಣದಲ್ಲಿ ಚಿನ್ನದ ಒಳ ಉಡುಪು ಸಿಕ್ಕಿದೆ ಅನ್ನೋ ಫೋಟೋ ವೈರಲ್. ಆದರೆ ಈ ‘ಗೋಲ್ಡನ್ ಇನ್ನರ್ವೇರ್’ ಕಥೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಮುದ್ರೆ ಬಿದ್ದಿಲ್ಲ. ಈಗಾಗಲೇ 7 ಸಂಸದರು ಸೇರಿ 47 ಜನರ ಬಂಧನ. ಇರಾಕ್ ಪ್ರಧಾನಿ ಅಲಿ ಅಲ್-ಜೈದಿ ಭ್ರಷ್ಟರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬಾಗ್ದಾದ್: ಇರಾಕ್ನಲ್ಲಿ ಪ್ರಧಾನಿ ಅಲಿ ಅಲ್-ಜೈದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದೆ. ಈ ಕಾರ್ಯಾಚರಣೆಯಲ್ಲಿ ಮಹಿಳಾ ಸಂಸದೆ ಹಿಂದ್ ಅಲ್-ಅಬ್ಬಾಸಿ ಸೇರಿದಂತೆ 7 ಸಂಸದರು, ಹಲವು ಅಧಿಕಾರಿಗಳು ಸೇರಿ 47 ಮಂದಿಯನ್ನು ಬಂಧಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳ ವರದಿ ಪ್ರಕಾರ, ಸಂಸದೆ ಅಬ್ಬಾಸಿ ಮನೆಯಲ್ಲಿ 57 ಮಿಲಿಯನ್ ಡಾಲರ್ ನಗದು ಮತ್ತು 27 ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನದ ಲೇಪಿತ ಒಳ ಉಡುಪು ಪತ್ತೆಯಾಗಿದೆ ಎಂಬ ಫೋಟೊ ವೈರಲ್ ಆಗಿದ್ದರೂ, ಇರಾಕ್ ಸರ್ಕಾರ ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ.
ಇರಾಕಿ ಹೈ ಜುಡಿಷಿಯಲ್ ಕೌನ್ಸಿಲ್ ಪ್ರಕಾರ, ಪ್ರತ್ಯೇಕ ಪ್ರಕರಣವೊಂದರಲ್ಲಿ ಮಾಜಿ ಉಪ ತೈಲ ಸಚಿವರಿಗೆ ಸಂಬಂಧಿಸಿದಂತೆ 10 ಮಿಲಿಯನ್ ಡಾಲರ್, 3 ಬಿಲಿಯನ್ ದಿನಾರ್, ಶಸ್ತ್ರಾಸ್ತ್ರ ಮತ್ತು 40 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.




