Kannada NewsKarnataka NewsLatest

*ಮರಕ್ಕೆ ಡಿಕ್ಕಿ ಹೊಡೆದ ಪೆಟ್ರೋಲ್ ಟ್ಯಾಂಕರ್ ಗೆ ಬೆಂಕಿ; ಪಕ್ಕದಲ್ಲಿದ್ದ ಹಾಲಿನ ಲಾರಿಯೂ ಬೆಂಕಿಗಾಹುತಿ*

ಪ್ರಗತಿವಾಹಿನಿ ಸುದ್ದಿ: ವೇಗವಾಗಿ ಬಂದ ಪೆಟ್ರೋಲ್‌ ಟ್ಯಾಂಕರ್‌ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿರುವ ಘಟನೆ ನದೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಬಳಿ ಈ ಘಟನೆ ನಡೆದಿದೆ ನಡೆದಿದೆ. ಪೆಟ್ರೋಲ್‌ ಟ್ಯಾಂಕರ್‌ ಲಾರಿ ಧಗಧಗನೆ ಹೊತ್ತಿ ಉರಿಯುತ್ತಿದ್ದಂತೆ, ಅಗ್ನಿ ಜ್ವಾಲೆ ಪಕ್ಕದಲ್ಲಿ ರಿವರ್ಸ್‌ ತೆಗೆಯುತ್ತಿದ್ದ ಹಾಲಿನ ಟ್ಯಾಂಕರ್‌ಗೂ ವ್ಯಾಪಿಸಿದೆ.

ನೋಡ ನೋಡುತ್ತಿದ್ದಂತೆ ಎರಡೂ ಲಾರಿಗಳು ಹೊತ್ತಿ ಉರಿದಿದ್ದು, ಚಾಲಕರು ತಕ್ಷಣ ಲಾರಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎರಡೂ ಲಾರಿಗಳು ಬಹುತೇಕ ಸುಟ್ಟು ಕರಕಲಾಗಿವೆ.

Home add -Advt

Related Articles

Back to top button