*ಹೆಚ್ಚಿನ ಬಡ್ಡಿ ಆಮೀಷ: 165 ಕೋಟಿ ವಂಚಿಸಿದ ಪೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಟಿಳಕವಾಡಿಯಲ್ಲಿರುವ ಅಪೇಕ್ಸ್ ಬಿಜ್ ಕಾರ್ಫ್ ಎಲ್ ಎಲ್ ಪಿ ಎಂಬ ಖಾಸಗಿ ಫೈನಾನ್ಸ್ ಕಂಪನಿ ಹೋಡಿಕೆದಾರರಿಗೆ ವಂಚಿಸಿ ಪರಾರಿಯಾಗಿದೆ ಎಂದು ಪ್ರತಿಭಟಿಸಲಾಗಿದೆ.
ಸೋಮವಾರ ಬೆಳಗಾವಿಯ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹೋಡಿಕೆದಾರರು ನ್ಯಾಯ ಕೊಡಿಸುವಂತೆ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಖಾಸಗಿ ಫೈನಾನ್ಸ್ ವಿರುದ್ಧ ಸುಮಾರು 165 ಕೋಟಿ ರೂ ವಂಚನೆಯ ಆರೋಪವನ್ನು ಮಾಡಿರುವ ಸಂತ್ರಸ್ಥರು ಸುಮಾರು 3500 ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಲಾಗಿದೆ.4 ಪರ್ಸಂಟ್ ಬಡ್ಡಿ ಆಮಿಷ ತೋರಿಸಿ ಹಣ ಸಂಗ್ರಹ ಮಾಡಲಾಗಿದೆ . ಅಲ್ಲದೇ ಕಂಪನಿಯ ಮಾಲೀಕರಾದ ಕಾಶೀನಾಥ ವಾಗ್ಮೂರೆ ಮತ್ತು ಗಣೇಶ್ ಭಂಡಾರಿ ಎನ್ನುವವರು ಹಣ ಸಂಗ್ರಹಿಸಿಕೊಂಡು ದುಬೈ ಓಡಿಹೋಗಿದ್ದಾರೆ.ಮಾಲೀಕರು ದುಬೈಗೆ ಓಡಿ ಹೋಗಿದ್ದು ನಮಗೆ ಸರಿಯಾಗಿ ಪ್ರತಿಕ್ರಿಯೇ ನೀಡುತ್ತಿಲ್ಲ ಎಂದು ವಂಚನೆಗೆ ಒಳಗಾದವರು ಆರೋಪಿಸಿದರು.
ಎಲ್ಲೋ ಕುಳಿತು ಕೇವಲ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ನಮ್ಮದುಡ್ಡು ನಮಗೆ ಕೊಡಿಸಿಕೊಡಿ ಎಂದು ಸಂತ್ರಸ್ಥರ ಆಗ್ರಹಿಸಿದ್ದು ಕಾಶೀನಾಥ ವಾಗ್ಮೂರೆ
ಗಣೇಶ ಭಂಡಾರಿ ಎನ್ನುವವರ ಮೇಲೆ ಕ್ರಮ ಕೈಗೊಳ್ಳೇಬೇಕು ಎಂದು ಆಗ್ರಹಿಸಿದ್ದಾರೆ.

