Belagavi NewsBelgaum NewsElection NewsKannada NewsKarnataka NewsNationalPolitics

*ಎಸ್ಐಆರ್ ಫಾರ್ಮ್ ತುಂಬಿ ಕೊಡದಿದ್ದರೆ ಮತದಾರರ ಪಟ್ಟಿಯಿಂದ ಡಿಲೀಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚುನಾವಣಾ ಆಯೋಗದ ನಿರ್ದೇಶನದಂತೆ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಗಣತಿ ನಮೂನೆ ವಿತರಣೆ, ಹಿಂಪಡೆಯುವಿಕೆ ಹಾಗೂ (ಡಿಜಿಟ ಲೈಜೇಷನ್) ಗಣಕೀಕರಣ ಕಾರ್ಯ ಪಾಲಿಕೆಯ ಎಸ್ಐಆರ್ ವಿಭಾಗದಲ್ಲಿ ಭರದಿಂದ ಸಾಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2.52.937 ಮತದಾರರಿದ್ದು, 257 ಮತಗಟ್ಟೆಗಳಿವೆ.  ಶೇ. ನೂರರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇಲ್ಲಿಯವರೆಗೆ 1.14.020 ಫಾರ್ಮಗಳ ಗಣಿಕೀಕರಣವಾಗಿದ್ದು, ಕಾರ್ಯ ಮುಂದುವರೆದಿದೆ ಎಂದು ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ, ದಕ್ಷಿಣ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಡಾ. ಸಿದ್ದು ಹುಲ್ಲೋಳಿ ತಿಳಿಸಿದ್ದಾರೆ. 

ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2.56.678 ಮತದಾರರಿದ್ದು,257 ಮತಗಟ್ಟೆಗಳಿವೆ.ಶೇ. ನೂರರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇಲ್ಲಿಯವರೆಗೆ 84.028 ಫಾರ್ಮಗಳ ಗಣಕೀಕರಣವಾಗಿ ಕಾರ್ಯ ಮುಂದುವರೆದಿದೆ ಎಂದು ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ, ಉತ್ತರ ಕ್ಷೇತ್ರದ ಮತದಾರರ ನೋಂದನಾಧಿಕಾರಿ ಉದಯಕುಮಾರ ಟಿ. ತಿಳಿಸಿದ್ದಾರೆ.

ಮೇಲಿಂದ ಮೇಲೆ ಸಭೆಗಳು, ವಿಡಿಯೋ ಕಾನ್ಫರೆನ್ಸ್, ಹಾಗೂ ಖುದ್ದು ಹಾಜರಾತಿಯ ಮೂಲಕ ಎಸ್ ಐ ಆರ್ ಕಾರ್ಯವನ್ನು ಪರಿಶೀಲಿಸುತ್ತಿರುವ ಪಾಲಿಕೆ ಆಯುಕ್ತ, ಮುಖ್ಯ ಮತದಾರರ ನೋಂದಣಾಧಿಕಾರಿ ಕಾರ್ತಿಕ್ ಎಂ ಅವರು ಈ ಕುರಿತು ಮಾತನಾಡಿ, ಹಲವಾರು ಬಾರಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಮ್ಮ ಇಲಾಖೆಗಳ ನಿತ್ಯದ ಕಾರ್ಯಗಳ ಜೊತೆಗೆ  ಎಸ್ ಐ ಆರ್ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಉತ್ತಮ ಹಾಗೂ ಶೀಘ್ರ ಕಾರ್ಯ ಮುಗಿಸಿರುವ ಸಿಬ್ಬಂದಿಯನ್ನು ಸನ್ಮಾನಿಸಿ ಪ್ರಶಂಸಾ ಪತ್ರ ನೀಡಲಾಗುತ್ತಿದೆ. ಅಚಾತುರ್ಯ ತೋರಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಸಮಸ್ಯೆಗಳಿರುವೆಡೆ ಮೇಲ್ವಿಚಾರಕರು ಭೇಟಿ ನೀಡಿ ಬಗೆಹರಿಸುತ್ತಿದ್ದಾರೆ. ಕಛೇರಿಯಲ್ಲಿ ಮತ್ತು ಕ್ಷೇತ್ರದಲ್ಲಿ ಎರಡೂ ಕಡೆಗೆ ಕಾರ್ಯಗಳು ನಡೆಯುತ್ತಿವೆ. ಮತದಾರರ ಅನುಕೂಲಕ್ಕಾಗಿ ಪಾಲಿಕೆ ಆವರಣದಲ್ಲಿ ಸಹಾಯ ಕೇಂದ್ರ ತೆರೆಯಲಾಗಿದೆ.

Home add -Advt

ಜಿಲ್ಲಾಧಿಕಾರಿಗಳೂ ಸಹ ಮಾರ್ಗದರ್ಶನ ನೀಡುತ್ತಿದ್ದಾರೆ. ಮೇಯರ್, ಉಪಮೇಯರ್,  ನಗರ ಸೇವಕರು ಹಾಗೂ ಮತದಾರರು ಸಹಕಾರ ನೀಡುತ್ತಿರುವುದರಿಂದ ನಿಗದಿತ ಅವಧಿಯೊಳಗೆ ಎಸ್ಐಆರ್ ಕಾರ್ಯ ಮುಗಿಯಲಿದೆ ಎಂದು ತಿಳಿಸಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್ ಅವರೂ ಸಹ ಇತ್ತೀಚೆಗೆ ಪಾಲಿಕೆಗೆ ಭೇಟಿ ನೀಡಿ ಎಸ್ ಐ ಆರ್ ಪ್ರಗತಿ ಪರಿಶೀಲಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಒಟ್ಟಾರೆ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರು ಎಸ್ಐಆರ್ ಕಾರ್ಯಕ್ಕೆ ತಮ್ಮನ್ನು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. 

ವಿಶೇಷ ಸೂಚನೆ

ಮತದಾರರಿಗೆ ಈ ಮೂಲಕ ತಿಳಿಸುವುದೇನೆಂದರೆ ಗಣತಿ ನಮೂನೆ ತುಂಬಿ ಕೊಡದಿದ್ದರೆ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಡಿಲೀಟ್ ಆಗುತ್ತದೆ. ಆದಕಾರಣ ಎಲ್ಲ ಮತದಾರರು ವಿತರಿಸಿದ ನಮೂನೆಯನ್ನು ತುಂಬಿ ಸಂಬಧಿಸಿದ  BLO ಗಳಿಗೆ ನೀಡಲು ವಿನಂತಿಸಲಾಗಿದೆ.

Related Articles

Back to top button