Belagavi NewsBelgaum NewsKannada NewsKarnataka NewsNationalPolitics

*ಶಿವಾನಂದ ನಿಲಣ್ಣವರ ಮನೆ ಮೇಲೆ ಇಡಿ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲೇ ಸಂಚಲನ ಸೃಷ್ಠಿಸಿದ ಬೆಳಗಾವಿಯ ಉದ್ಯಮಿ ಶಿವಾನಂದ ನಿಲಣ್ಣವರ ಪ್ರಕರಣದಲ್ಲಿ ಇದೀಗ ಇಡಿ ಅಧಿಕಾರಿಗಳು ಎಂಟ್ರಿ ಆಗಿದ್ದಾರೆ.‌

ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಆರೋಪ ಮೇಲೆ ಸಿಐಡಿ ಅಧಿಕಾರಿಗಳ ತನಿಖೆ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಕಂಪನಿಯ ಎಂ.ಡಿ ಶಿವಾನಂದ ನೀಲಣ್ಣವರಿಗೆ ಸೇರಿದ ಬೆಳಗಾವಿಯ ಶಿವಬಸವ ನಗರದ ಅಪಾರ್ಟ್‌ಮೆಂಟ್‌ನಲ್ಲಿರುವ  ನಿವಾಸದ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Home add -Advt

ಮಂಗಳೂರು ಹಾಗೂ ಗೋವಾ ಘಟಕದ ಇಡಿ ಅಧಿಕಾರಿಗಳ ತಂಡ ಈ ದಾಳಿಯಲ್ಲಿ ಭಾಗಿಯಾಗಿದ್ದು, ಮನೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಶಿವಾನಂದ ನೀಲಣ್ಣವರ ಆಪ್ತರ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಚಿಕ್ಕೋಡಿಯಲ್ಲಿರುವ ಸುಭಾಷ್ ಅವರ ಮನೆಯ ಮೇಲೂ ದಾಳಿ ನಡೆದಿದೆ.

ದಾಳಿಯ ವೇಳೆ ಶಿವಾನಂದ ನೀಲಣ್ಣವರ ಪತ್ನಿ ಸಂಗೀತಾ ಹಾಗೂ ಅಳಿಯ ಸಂಜು ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. 

Related Articles

Back to top button