ಪ್ರಗತಿವಾಹಿನಿ ಸುದ್ದಿ: ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾಗಿದ್ದರು. ಪತ್ನಿಯನ್ನು ಕಳೆದುಕೊಂಡು ರಾತ್ರಿ ಇಡೀ ಕೊರಗಿದ್ದ ಪತಿ ಇಂದು ಬೆಳಿಗ್ಗೆ ಪತ್ನಿಯ ಅಂತ್ಯ ಸಂಸ್ಕಾರಕ್ಕೂ ಮುನ್ನವೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹದಡಿ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ (81), ಸಿದ್ದಮ್ಮ (75) ಒಟ್ಟಿಗೆ ಜೀವ ಬಿಟ್ಟ ದಂಪತಿ. ಭಾನುವಾರ ರಾತ್ರಿ 11 ಗಂಟೆಗೆ ವಯೋಸಹಜ ಕಾಯಿಲೆಯಿಂದ ಪತ್ನಿ ಸಿದ್ದಮ್ಮ ನಿಧನರಾಗಿದ್ದರು. ಪತ್ನಿಯನ್ನು ಕಳೆದುಕೊಂಡು ರಾತ್ರಿ ಇಡೀ ಕೊರಗಿದ್ದ ಪತಿ ಮಲ್ಲಪ್ಪ ಇಂದು ಬೆಳಿಗ್ಗೆ ಪತ್ನಿಯ ಅಂತ್ಯ ಸಂಸ್ಕಾರಕ್ಕೂ ಮುನ್ನವೇ ಮೃತಪಟ್ಟಿದ್ದಾರೆ.
ಸಿದ್ದಮ್ಮನ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಪತ್ನಿಯನ್ನು ಬಿಟ್ಟಿರಲಾಗದ ಮಲ್ಲಪ್ಪ, ಆಕೆಯ ಶವದ ಬಳಿ ಕೂತಲ್ಲೇ ಸಾವನಪ್ಪಿದ್ದಾರೆ. ಹಿರಿ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.
ಒಟ್ಟಿಗೆ ಜೀವನ ನಡೆಸಿ, ಒಟ್ಟಿಗೆ ಜೀವ ಬಿಟ್ಟ ಜೋಡಿಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳು ಮರಿಮಕ್ಕಳನ್ನು ದಂಪತಿ ದಂಪತಿಗಳು ಅಗಲಿದ್ದಾರೆ. ಇಡೀ ಗ್ರಾಮದಲ್ಲಿ ಶೋಕ ಮನೆ ಮಾಡಿದೆ.



