
ಪ್ರಗತಿವಾಹಿನಿ ಸುದ್ದಿ: 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಷಣ ಮಾಡುವಾಗ ಏಕಾಏಕಿ ಅಸ್ವಸ್ಥಗೊಂಡು ಸಚಿವರೊಬ್ಬರು ಕುಸಿದು ಬಿದ್ದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಸಚಿವ ಆನಂ ರಾಮನಾರಾಯಣ ರೆಡ್ಡಿ ಅವರು ವೇದಿಕೆಯಲ್ಲಿ ಭಾಷಣ ಮಾಡುವಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸಚಿವರ ನೆರವಿಗೆ ಧಾವಿಸಿ ಪಕ್ಕದಲ್ಲಿದ್ದ ಚೇರ್ ಮೇಲೆ ಕೂರಿಸಿದ್ದಾರೆ.
ತಿರುಪತಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಈ ಘಟನೆ ನಡೆದಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಸತತ ಒಂದು ಗಂಟೆಯಿಂದ ನಿಂತುಕೊಂಡೇ ಭಾಷಣ ಮಾಡುತ್ತಿದ್ದ ಸಚಿವರಿಗೆ ರಕ್ತದೊತ್ತಡ (BP) ದಿಢೀರ್ ಕುಸಿದಿದ್ದರೆ. ಭಾಷಣ ಮುಂದುವರಿಸಲಾಗದೆ ಸಚಿವರು ಅಸ್ವಸ್ಥತೆಯನ್ನು ಅನುಭವಿಸಿದ ತಕ್ಷಣವೇ ವೇದಿಕೆಯಲ್ಲಿದ್ದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅವರ ನೆರವಿಗೆ ಆಗಮಿಸಿದ್ದಾರೆ. ಸಚಿವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.




