CrimeKannada NewsLatestNational

*ಅಶೋಕಧಾಮ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 6 ಭಕ್ತರ ಸಾವು*

ಪ್ರಗತಿವಾಹಿನಿ ಸುದ್ದಿ: ಶ್ರಾವಣ ಮಾಸದ ಪವಿತ್ರ ಸೋಮವಾರದಂದು ಅಶೋಕಧಾಮ ದೇವಾಲಯದ ಆವರಣದಲ್ಲಿ ದಿಢೀರ್ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ 6 ಭಕ್ತರು ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬಿಹಾರದ ಲಖಿಸರಾಯ್ ಜಿಲ್ಲೆಯ ಪ್ರಸಿದ್ದ ಅಶೋಕಧಾಮ ದೇವಾಲಯದಲ್ಲಿ  ಈ ಘಟನೆ ನಡೆದಿದೆ. ಶ್ರಾವಣದ  ಸೋಮವಾರದ ಪ್ರಯುಕ್ತ ಶಿವನಿಗೆ ಜಲಾಭಿಷೇಕ ಮಾಡಲು ದೇವಾಲಯಕ್ಕೆ ಬೆಳಗಿನ ಜಾವದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ವೇಳೆ ವಿದ್ಯುತ್ ತಂತಿ ಅಥವಾ ಕಂಬ ಬಿದ್ದು ವಿದ್ಯುತ್ ಹರಿದಿದೆ ಎಂಬ ವದಂತಿ ಹರಡಿದ್ದು, ಭೀತಿಯಿಂದ ಜನರು ಒಂದೇ ಬಾರಿಗೆ ಹೊರಗೆ ಓಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿ ಕಾಲ್ತುಳಿತ ಸಂಭವಿಸಿದೆ.

Home add -Advt

ಜನಸಂದಣಿಯ ಒತ್ತಡ ತಾಳಲಾರದೆ ಜನರು ಒಬ್ಬರ ಮೇಲೊಬ್ಬರು ಬಿದ್ದ ಪರಿಣಾಮ ಈ ಸಾವು-ನೋವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

Related Articles

Back to top button