Kannada NewsLatestNationalPolitics

*ಸ್ವಾತಂತ್ರ್ಯ ದಿನಕ್ಕೂ ಮುನ್ನ ಉಗ್ರರ ಸಂಚು ವಿಫಲ*

14 ರಾಜ್ಯಗಳಲ್ಲಿ ದಾಳಿ: 253 ಮಂದಿ ಬಂಧನ

Home add -Advt

ಪ್ರಗತಿವಾಹಿನಿ ಸುದ್ದಿ, ನವದೆಹಲಿ : ದೇಶದ ಸ್ವಾತಂತ್ರ್ಯ ದಿನಾಚರಣೆ ವೇಳೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಅನ್ನು ಕೇಂದ್ರ ಸರ್ಕಾರ ನೆಲಸಮಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಆಗಸ್ಟ್ 12 ರಂದು 14 ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ 253 ಶಂಕಿತರನ್ನು ಬಂಧಿಸಿವೆ.

ಕರ್ನಾಟಕದಲ್ಲೂ ಕಾರ್ಯಾಚರಣೆ
ಪಾಕಿಸ್ತಾನ ಮೂಲದ ಈ ಉಗ್ರ ಜಾಲ ಗ್ರೆನೇಡ್ ದಾಳಿ, ಐಇಡಿ ಸ್ಫೋಟ, ಗುರಿಯಿಟ್ಟು ಹತ್ಯೆ ಹಾಗೂ ಪ್ರಮುಖ ಸ್ಥಳಗಳ ರೆಕ್ಕಿ ಮಾಡುವಲ್ಲಿ ತೊಡಗಿತ್ತು.
ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್‌ನಲ್ಲಿ ಹೆಚ್ಚಿನ ಬಂಧನಗಳಾಗಿವೆ. ಕರ್ನಾಟಕದಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ.

ಸ್ಫೋಟಕ, ಶಸ್ತ್ರಾಸ್ತ್ರ ವಶ
ಕಾರ್ಯಾಚರಣೆ ವೇಳೆ ಪಾಕಿಸ್ತಾನ ಆರ್ಡಿನೆನ್ಸ್ ಫ್ಯಾಕ್ಟರಿ ಗುರುತು ಇರುವ ಗ್ರೆನೇಡ್‌ಗಳು, ಐಇಡಿ, ಪಿಸ್ತೂಲ್, ಗುಂಡುಗಳು ಹಾಗೂ ಗೂಢಾಚಾರಿಕೆಗೆ ಬಳಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ 80ಕ್ಕೂ ಹೆಚ್ಚು FIR ದಾಖಲಾಗಿವೆ.

ಅಮಿತ್ ಶಾ ಟ್ವೀಟ್
“ಮೋದಿ ಸರ್ಕಾರವು ಸ್ವಾತಂತ್ರ್ಯ ದಿನಕ್ಕೂ ಮುನ್ನವೇ ಐಎಸ್‌ಐ ಬೆಂಬಲಿತ ಉಗ್ರ ಜಾಲವನ್ನು ನಾಶಪಡಿಸಿದೆ. ಭಯೋತ್ಪಾದನೆಯ ವಿರುದ್ಧ ನಮ್ಮ ಸೊನ್ನೆ ಸಹಿಷ್ಣುತೆ ನೀತಿ ಮುಂದುವರಿಯಲಿದೆ” ಎಂದು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಗೃಹ ಸಚಿವಾಲಯದ ಪ್ರಕಾರ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಮನ್ವಯ ಕಾರ್ಯಾಚರಣೆ ಮುಂದುವರೆಯಲಿದೆ.

Related Articles

Back to top button