Kannada NewsKarnataka NewsLatestNational

*ಸಕ್ಕರೆ ಬೆನ್ನಲ್ಲೇ 80ರ ಗಡಿ ದಾಟಿದ ಬೆಲ್ಲ..?*

ಪ್ರಗತಿವಾಹಿನಿ ಸುದ್ದಿ: ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಬೆಲ್ಲದ ಬೆಲೆಯೂ ಕೆಜಿಗೆ 80 ರೂ. ಗಡಿ ತಲುಪಿದ್ದು, ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಮಹಾಲಿಂಗಪುರ ಎಪಿಎಂಸಿ ಮೂಲಗಳ ಪ್ರಕಾರ, ಕೇವಲ ನಾಲ್ಕು ದಿನಗಳಲ್ಲಿ ಬೆಲ್ಲದ ಬೆಲೆ ಕ್ವಿಂಟಲ್‌ಗೆ 2,700ರಷ್ಟು ಏರಿಕೆಯಾಗಿದೆ. ಕ್ವಿಂಟಲ್‌ಗೆ 4,500 ಇದ್ದ ಬೆಲೆ 7,200ಕ್ಕೆ ಏರಿಕೆಯಾಗಿದೆ. ಈ ಹಿಂದೆ ಪ್ರತಿದಿನ ಸರಾಸರಿ 15ರಿಂದ 20 ಲೋಡ್ ಬೆಲ್ಲವನ್ನು ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಇದೀಗ ಅದು ಒಂದೆರಡು ಲೋಡ್‌ಗೆ ಕುಸಿದಿದೆ ಎನ್ನಲಾಗಿದೆ.

Home add -Advt

ಕಬ್ಬಿನ ಕೊರತೆಯಿಂದ ಸಕ್ಕರೆ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಬೆಲ್ಲದ ದರವೂ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಪ್ರೀಮಿಯಂ ಉತ್ಪನ್ನವೆಂದು ಪರಿಗಣಿಸಲ್ಪಡುವ ಮಹಾಲಿಂಗಪುರ ಬೆಲ್ಲದ ಮೇಲೆ ಅವಲಂಬನೆ ಇದೆ. ಮಂಡ್ಯ ಎರಡನೇ ಪ್ರಮುಖ ಮೂಲವಾಗಿದೆ.

ಪೂರೈಕೆ ಮಂಗಳವಾರ ಮಹಾಲಿಂಗಪುರ ಬೆಲ್ಲ ಕೆಜಿಗೆ 65ಕ್ಕೆ ಮಾರಾಟವಾಗುತ್ತಿತ್ತು. ಆದರೆ ಈಗ ಬೆಲೆ ಗಣನೀಯ ಏರಿಕೆ ಕಂಡಿದೆ. ಕಡಿಮೆಯಾಗುತ್ತಿರುವುದು ಹಾಗೂ ಬೇಡಿಕೆ ಹೆಚ್ಚುತ್ತಿರುವುದರಿಂದ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ ಎಂದು ವರ್ತಕರು ತಿಳಿಸಿದ್ದಾರೆ.

Related Articles

Back to top button