Belagavi NewsBelgaum NewsKannada NewsKarnataka NewsLatestNational

*ದಶಮಾನೋತ್ಸವ ಸಂಭ್ರಮದಲ್ಲಿ ಶ್ರೀ ಗುರು ಶಾಂತೇಶ್ವರ ಸಂಸ್ಥಾನ ಹಿರೇಮಠ ಶಾಖಾ ಮಠ*

ಪ್ರಗತಿವಾಹಿನಿ ಸುದ್ದಿ: ಶ್ರಾವಣ ಮಾಸದ ಈ ಶುಭ ಸಂದರ್ಭದಲ್ಲಿ ಭಕ್ತರು ಮಠ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಈ ಬಾರಿ ನಾವೇ ಭಕ್ತರ ಮನೆಗಳಿಗೆ ತೆರಳಿ ಆಶೀರ್ವಾದ ಮಾಡುವ ಸಂಕಲ್ಪವನ್ನು ಹೊಂದಿದ್ದೇವೆ ಎಂದು ಹುಕ್ಕೇರಿಯ ಶ್ರೀ ಗುರು ಶಾಂತೇಶ್ವರ ಸಂಸ್ಥಾನ ಹಿರೇಮಠದ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಯಬಾಗ ಪಟ್ಟಣದ ಶ್ರೀ ಗುರು ಶಾಂತೇಶ್ವರ ಸಂಸ್ಥಾನ ಹಿರೇಮಠ ಶಾಖಾ ಮಠದ ದಶಮಾನೋತ್ಸವ  ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಜಾಹೀರಾತು ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Home add -Advt

ಶ್ರೀ ಗುರು ಶಾಂತೇಶ್ವರ ಮಠದಲ್ಲಿ ಸಂಭ್ರಮಿಸಲಿರುವ ಜಾತ್ರಾ ಮಹೋತ್ಸವ ನಡೆಯಲಿದೆ. ದಶಮಾನೋತ್ಸವ ನಿಮಿತ್ಯ 500 ಕುಂಭಗಳ ಬೃಹತ್ ಮೆರವಣಿಗೆ ನಡೆಯಲಿದೆ ಎಂದರು.

ಗುರು ಶಾಂತೇಶ್ವರರ ಅನುಗ್ರಹ ಹಾಗು ಈ ಭಾಗದ ಜನಪ್ರಿಯ ಶಾಸಕರಾದ ದುರ್ಯೋಧನ ಐಹೊಳೆ ಹಾಗೂ ಅವರ ಸುಪುತ್ರರಾದ ಅರುಣ ಐಹೊಳೆ ಮತ್ತು ಶ್ರೀಮಠದ ಸಕಲ ಸದ್ಭಕ್ತರು ಶ್ರೀ ಮಠದ ಮೇಲೆ ಇಟ್ಟುಕೊಂಡಿರುವ ಅಪಾರಭಕ್ತ ಭಾವವೇ ಇಂದು ಶ್ರೀ ಮಠವು ದಶಮಾನೋತ್ಸವ ಕಾರ್ಯಕ್ರಮವನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತಿದೆ ಎಂದರು.  

Related Articles

Back to top button