*ಗೋಕಾಕ ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸುವಂತೆ ಬಿಜೆಪಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಗೋಕಾಕ ಬಿಜೆಪಿ ಪಕ್ಷದ ನಗರ ಮತ್ತು ಗ್ರಾಮೀಣ ಘಟಕದ ನೂರಾರು ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಭಾರಿ ಪ್ರತಿಭಟನೆ ಮಾಡಿದರು.
ಶಾಸಕರ ಗ್ರಹ ಕಚೇರಿಯಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.
ರೈತ ಸಂಘದ ತಾಲೂಕಾ ಅಧ್ಯಕ್ಷ ಮಂಜು ಪೂಜೇರಿ ಮಾತನಾಡಿ, ಪಕ್ಷಾತಿತವಾಗಿ ಅಂತ ಹೇಳುತ್ತಿರುವ ಮುಖ್ಯಮಂತ್ರಿ ಡಿ, ಕೆ, ಶಿವಕುಮಾರ ಇವರಿಗೆ ಗೋಕಾಕ ತಾಲೂಕನ್ನು ಬರಪೀಡಿತ ಘೋಷಣೆಯಿಂದ ಕೈ ಬಿಟ್ಟಿರೋದು ಯಾವ ಉದ್ದೇಶಕ್ಕಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಾಗಿಯಾದ ಉದ್ದಪ್ಪ ಬಣಕಾರಿ ಇವರು ಸಿಎಂ ಡಿ ಕೆ ಶಿವಕುಮಾರ ಇವರಿಗೆ ನಮ್ಮ ಗೋಕಾಕ ನಿಮಗೆ ಕಾಣುತ್ತಿಲ್ಲವೆ ನಮ್ಮಲ್ಲಿಯೂ ಮಳೆ ಇಲ್ಲದೆ ಬೆಳೆಗಳು ಬೆಳೆಯದೆ ಜಾನುವಾರುಗಳಿಗೆ ನೀರಿಲ್ಲ ಅದಕ್ಕಾಗಿ ಗೋಕಾಕ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತಸಹಾಯಕ ಸುರೇಶ ಸನದಿ, ಭೀಮಗೌಡ ಪೊಲೀಸಗೌಡ ಪಾಟೀಲ, ನಗರಘಟಕದ ಅಧ್ಯಕ್ಷ ಭೀಮಶಿ ಭರಮನ್ನಾವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು.


