
ಪ್ರಗತಿವಾಹಿನಿ ಸುದ್ದಿ/ ಹುಬ್ಬಳ್ಳಿ: ಅನಾರೋಗ್ಯದ ಮಧ್ಯೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಹ ಹುಬ್ಬಳ್ಳಿಯಲ್ಲಿ ಶನಿವಾರ ಉದ್ಘಾಟನೆಯಾದ ಅತ್ಯಾಧುನಿಕ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು.

ಆಸ್ಪತ್ರೆ ಉದ್ಘಾಟನೆಗೆಂದು ದೆಹಲಿಯಿಂದ ಆಗಮಿಸಿದ್ದ ಅಮಿತ್ ಶಹ ದಿಢೀರ್ ಅನಾರೋಗ್ಯದ ಕಾರಣ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ.

ಆದರೆ ಸಂಜೆ ಆಸ್ಪತ್ರೆಗೆ ಆಗಮಿಸಿ, ದೀಪ ಬೆಳಗಿಸಿದ್ದಲ್ಲದೆ, ಶುಭ ಹಾರಿಸಿದರು. ಆಸ್ಪತ್ರೆಯ ಕುರಿತು ಕೆಎಲ್ಇ ಗೌರವಾಧ್ಯಕ್ಷ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಮಾಹಿತಿ ನೀಡಿದರು. ಕೆಎಲ್ಇ ಸಂಸ್ಥೆಯ ನಿರ್ದೇಶಕರು, ಬಿಜೆಪಿ ಮುಖಂಡರು, ಗಣ್ಯರು ಇದ್ದರು.




