ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ‘ವಿನೋದ ಚೋಪ್ರಾ ಫಿಲ್ಮ್’ ಇದು ನಿರ್ಮಿಸಿದ ‘ಶಿಕಾರಾ’ ಚಲನಚಿತ್ರ ಪ್ರದರ್ಶನಗೊಂಡಿತು. ಈ ಚಲನಚಿತ್ರವು ಕಾಶ್ಮೀರಿ ಹಿಂದೂಗಳ ಜೀವನವನ್ನಾಧರಿಸಿದೆ ಎಂದು ಚಲನಚಿತ್ರದ ಪ್ರಮೋಶನ ಸಮಯದಲ್ಲಿ ಹೇಳಿದ್ದರು.
ಪ್ರತಿಯೊಂದು ಪೋಸ್ಟರ್‌ನಲ್ಲಿ ‘ಶಿಕಾರಾ-ದ-ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್’ ಎಂದು ಬರೆಯಲಾಗಿದೆ. ಆದರೆ ಚಲನಚಿತ್ರದ ಪ್ರದರ್ಶನವಾಗುವ ದಿನ ಚಲನಚಿತ್ರದ ಪೋಸ್ಟರ್‌ನಲ್ಲಿ ‘ಶಿಕಾರಾ – ಅ ಟೈಮ್‌ಲೆಸ್ ಲವ್ ಸ್ಟೋರಿ ಇನ್ ದ ವರ್ಸ್ಟ್ ಆಫ್ ಟೈಮ್’ ಎಂದು ಬದಲಾಯಿಸಿತು.

ಪ್ರತ್ಯಕ್ಷದಲ್ಲಿ ಸಾವಿರಾರು ಕಾಶ್ಮೀರಿ ಹಿಂದೂಗಳ ಬರ್ಬರ ಹತ್ಯೆ, ನೂರಾರು ಕಾಶ್ಮೀರಿ ಹಿಂದೂ ಮಾತೆ-ಭಗಿನಿಯರ ಮೇಲೆ ಬಲಾತ್ಕಾರ, ಸಾವಿರಾರು ದೇವಸ್ಥಾನಗಳ ಧ್ವಂಸ ಹಾಗೂ ೪.೫ ಲಕ್ಷ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾಗುವಷ್ಟು ಭಯಾನಕ ಮತ್ತು ರಕ್ತರಂಜಿತ ಇತಿಹಾಸವಿರುವಾಗ ಅದನ್ನು ಮುಚ್ಚಿಡುವ ಹೀನ ಪ್ರಯತ್ನವನ್ನು ನಿರ್ಮಾಪಕ ವಿಧು ವಿನೋದ ಚೋಪ್ರಾರವರು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಶ್ಮೀರಿ ಹಿಂದೂಗಳ ದುಃಖವನ್ನು ತೋರಿಸುವ ಬದಲು ವಿಧು ವಿನೋದ ಚೋಪ್ರಾ ಇವರು ೩೦ ವರ್ಷಗಳ ಗಾಯವನ್ನು ನೆನಪಿಸಿ ಅದರ ಮೇಲೆ ಬರೆ ಎಳೆದಿದ್ದಾರೆ. ಆದುದರಿಂದ ಈ ಚಲನಚಿತ್ರದ ಮೇಲೆ ಬಹಿಷ್ಕಾರ ಹಾಕಬೇಕು ಎಂದು ರಮೇಶ ಶಿಂಧೆ ಕರೆ ನೀಡಿದ್ದಾರೆ.
ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮೊಟ್ಟಮೊದಲು ಬಾಲಿವುಡ್ ಗಮನಹರಿಸಿದೆ, ಎಂದು ಮೊದಲು ಅನ್ನಿಸಿತ್ತು. ಪ್ರತ್ಯಕ್ಷ ಚಲನಚಿತ್ರದಲ್ಲಿ ಮಾತ್ರ ಮುಸಲ್ಮಾನರ ಸಹೋದರತೆ, ಭಾರತದ್ವೇಷ ಮತ್ತು ಕಾಶ್ಮೀರಿ ಹಿಂದೂಗಳು ಪುನಃ ಕಾಶ್ಮೀರದಲ್ಲಿ ಬರುವ ಆಶಾಭಾವನೆ ತೋರಿಸದಿರುವುದು, ಇಂತಹ ಅಯೋಗ್ಯ ಭೂಮಿಕೆ ನೋಡಲು ಸಿಕ್ಕಿತು. ಇದು ಕಾಶ್ಮೀರಿ ಹಿಂದೂಗಳ ಮೇಲೆ ಮತ್ತೊಮ್ಮೆ ಮಾನಸಿಕ ಅತ್ಯಾಚಾರ ಮಾಡಿದಂತಿದೆ, ಎಂದು ಶಿಂಧೆ ಹೇಳಿದ್ದಾರೆ.
ಈ ತಪ್ಪಿಗಾಗಿ ಭಾರತೀಯ ಸಮಾಜವು ಎಂದೂ ಕ್ಷಮಿಸುವುದಿಲ್ಲ. ಆದುದರಿಂದ ವಿಧು ವಿನೋದ ಚೋಪ್ರಾ ಇವರ ಚಲನಚಿತ್ರವನ್ನು ಬಹಿಷ್ಕರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಬೆಳಗಾವಿಯ ಸಮನ್ವಯಕ ಸುಧೀರ ಹೇರೇಕರ್ ಸಹ ಕರೆ ನೀಡಿದ್ದಾರೆ.