
ಪ್ರಗತಿವಾಹಿನಿ ಸುದ್ದಿ: ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೇದಾರನಾಥದ ಚಿರ್ಬಾಸಾ ಬಳಿ ಈ ದುರಂತ ಸಂಭವಿಸಿದೆ. ಭೂಕುಸಿತದ ಹಿನ್ನೆಲೆಯಲ್ಲಿ 1,500 ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸೆ.27ರಂದು ತಡರಾತ್ರಿ ಗೌರಿಕುಂಡದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಚಿರ್ಬಾಸಾ ಬಳಿಯ ಮಾರ್ಗದಲ್ಲಿ ಬೆಟ್ಟದಿಂದ ಬಂಡೆ, ಶಿಲಾಖಂಡದ ರಾಶಿಗಳು ಏಕಾಏಕಿ ಕೂಸಿದು ಬಿದ್ದಿವೆ. ಪರಿಣಾಮ ಕಲ್ಲು ಬಡಿದು ಬಾಲಕ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಇಟಾ ಮೂಲದ ಬಾಲಕ ಯಶ್(5) ಮೃತ ಬಾಲಕ. ಅವಶೇಷಗಳ ಅಡಿಯಲ್ಲಿ ಹಲವು ಯಾತ್ರಿಕರು ಸಿಲುಕಿಕೊಂಡಿದ್ದರು.
ತಕ್ಷಣ ಸಬ್ ಇನ್ಸ್ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಜಂಟಿ ತಂಡವು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಹಲವರನ್ನು ರಕ್ಶಿಸಲಾಗಿದೆ. ಇನ್ನು 1,500 ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




