*ಸಜಾ ಕೈದಿಯ ಪತ್ನಿಗೆ ವಿಡಿಯೋ ಕಾಲ್ ಮಾಡಿ ವಿವಸ್ತ್ರವಾಗುವಂತೆ ಹೇಳಿದ್ದ ಡಿಐಜಿ ಸೀಮಶೇಖರ್: ಬಂಧಿತ ಅಧಿಕಾರಿಯ ಕರ್ಮಕಾಂಡ ಬಯಲು*

ಪ್ರಗತಿವಾಹಿನಿ ಸುದ್ದಿ: ಸುಪ್ರೀಂ ಕೋರ್ಟ್ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಡಿಐಜಿಯ ಮತ್ತಷ್ಟು ಕರ್ಮಕಾಂಡ ಬಯಲಾಗಿದೆ.
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನ ಸುಪ್ರೀಂ ಕೋರ್ಟ್ನ ನಕಲಿ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಶಂಕರ್ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ನಕಲಿ ಆದೇಶವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ನಕಲಿ ದಾಖಲೆಯನ್ನ ಜೈಲಿನ ಎಸ್ಡಿಎ ಆಗಿದ್ದ ಶ್ರೀಕಾಂತ್ ಎಸ್. ಎಂಬಾತ ಸೃಷ್ಟಿಸಿದ್ದಾನೆ ಎಂಬ ಆರೋಪವಿದೆ. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಐಜಿ ಸೋಮಶೇಖರ್ ಹಾಗೂ ಶ್ರೀಕಾಂತ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಐಜಿ ಸೋಮಶೇಖರ್, ಸಜಾ ಕೈದಿ ಶಂಕರ್ ನನ್ನು ಬಿಡುಗಡೆ ಮಾಡಲು ಆತನ ಪತ್ನಿಯ ದೇಹ ಬಯಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಸಹಾಯ ಮಾಡುವ ಭರವಸೆ ನೀಡಿ. ಸಜಾ ಕೈದಿ ಶಂಕರ್ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಸೋಮಶೇಖರ್, ವಿವಸ್ತ್ರವಾಗುವಂತೆ ಕೀರುಕುಳ ನೀಡುತ್ತಿದ್ದ. ಆಕೆಯನ್ನು ಲೈಂಗಿಕವಾಗಿಯೂ ಅಧಿಕಾರಿ ಬಳಸಿಕೊಂಡಿದ್ದ ಎನ್ನಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಶಂಕರ್ ಬಿಡಿಗಡೆಯಾಗಿ ಹೊರ ಬಂದ ಬಳಿಕ ಶಂಕರ್ ಪತ್ನಿ ಮನೆಗೆ ಹೋಗದೇ ಬೇರೊಂದು ಮಹಿಳೆಯೊಂದಿಗೆ ಇದ್ದ. ಇದರಿಂದ ಬೇಸತ್ತ ಶಂಕರ್ ಪತ್ನಿ ನಡೆದ ಘಟನೆಯ ಸೇಡು ತೀರಿಸಿಕೊಳ್ಳಲು ಡಿಐಜಿ ಸೋಮಶೇಖರ್ ಕಾಮಕಾಂಡ ಹಾಗೂ ಸುಪ್ರೀಂ ಕೋರ್ಟ್ನ ನಕಲಿ ಆದೇಶ ಸೃಷ್ಟಿಸಿ ಕೈದಿ ಬಿಡುಗಡೆ ಮಾಡಿರುವ ಬಗ್ಗೆ ವಿಷಯ ಬಹಿರಂಗ ಪಡಿಸಿದ್ದಾರೆ ಅನುಮಾನ ವ್ಯಕ್ತವಾಗಿದೆ. ಒಟ್ಟಾರೆ ಬಂಧನಕ್ಕೊಳಗಾಗಿರುವ ಡಿಐಜಿ ಸೋಮಶೇಖರ್ ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




