Belagavi NewsBelgaum NewsKannada NewsNationalPolitics

*ಅವರೊಳ್ಳಿ ರುದ್ರಸ್ವಾಮಿ ಮಠದಿಂದ ರಾಜಹಂಸಗಡ ಕೋಟೆವರೆಗೆ ಪಾದಯಾತೆ ಸಂಪನ್ನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂದು ಧರ್ಮಜಾಗೃತಿಯ ಉದ್ದೇಶದಿಂದ ತಾಲ್ಲೂಕಿನ ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದಿಂದ ಬೆಳಗಾವಿ ತಾಲ್ಲೂಕು ರಾಜಹಂಸಗಡ ಕೋಟೆವರೆಗೆ ಭಾನುವಾರ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. 

ಅವರೊಳ್ಳಿ ರುದ್ರಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಮುಂಜಾನೆ ತಾಲ್ಲೂಕಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು ಗೋಮಾತೆಯ ಪೂಜೆಯೊಂದಿಗೆ ಪಾದಯಾತ್ರೆಗೆ ಚಾಲನೆ ನೀಡಿದರು. ತಾಲ್ಲೂಕಿನ ವಿವಿಧ ಭಾಗಗಳ ಅಸಂಖ್ಯಾತ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಹಿಂದೂ ಧರ್ಮದ ಜಾಗೃತಿ, ಹಿಂದು ಬಾಂಧವರಲ್ಲಿ ಏಕತೆ ಹಾಗೂ ಸಂಘಟಿತ ಮನೋಭಾವನೆಯನ್ನು ಬಲಪಡಿಸುವ ಉದ್ದೇಶದಿಂದ ರುದ್ರಸ್ವಾಮಿ ಮಠದ ಪೀಠಾಧ್ಯಕ್ಷ ಚನ್ನಬಸವದೇವರ ನೇತೃತ್ವದಲ್ಲಿ ಆಯೋಜಿಸಿದ್ದ ಪಾದಯಾತ್ರೆ ಪಾರಿಶ್ವಾಡ, ಬಂಡೆಮ್ಮನಗರ, ದೇವಲತ್ತಿ, ಮುಡುಗಿನಕೊಪ್ಪ, ಬಿದರಭಾವಿ ಮಾರ್ಗವಾಗಿ ಮಧ್ಯಾಹ್ನ ತೋಪಿನಕಟ್ಟಿ ಗ್ರಾಮವನ್ನು ಪ್ರವೇಶಿಸಿತು. 

ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ತೋಪಿನಕಟ್ಟಿಯ ಸಿದ್ಧಾಶ್ರಮ ಮಠದಲ್ಲಿ ಮಧ್ಯಾಹ್ನದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಯಾತ್ರಿಕರು ಮಠದಲ್ಲಿ ಸಿದ್ಧಪಡಿಸಿದ್ದ ಪ್ರಸಾದ ಸ್ವೀಕರಿಸಿ ಕೆಲಕಾಲ ವಿಶ್ರಾಂತಿ ಪಡೆದರು.

ಮಧ್ಯಾಹ್ನದ ಬಳಿಕ ತೋಪಿನಕಟ್ಟಿಯಿಂದ ಬೀಳ್ಕೊಟ್ಟ ಪಾದಯಾತ್ರೆ ಗರ್ಲಗುಂಜಿ, ರಾಜಹಂಸಗಡ ಮಾರ್ಗವಾಗಿ ಒಟ್ಟು 28ಕಿಮೀ ಸಾಗಿ ಸಂಜೆ ರಾಜಹಂಸಗಡ ಕೋಟೆಯನ್ನು ತಲುಪಿತು. ಇದೇ ಸಂದರ್ಭದಲ್ಲಿ ಭಕ್ತರಿಗಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಹಿರೇಮುನವಳ್ಳಿ ಶಾಂಡಿಲ್ಯೇಶ್ವರ ಮಠದ ಶ್ರೀಗಳು ಸೇರಿದಂತೆ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳ ರಾಜಕೀಯ ಮುಖಂಡರು, ಅವರೊಳ್ಳಿ ರುದ್ರಸ್ವಾಮಿ ಮಠದ ಭಕ್ತರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button