Kannada NewsKarnataka NewsPolitics

*ಸ್ಟಿಂಗ್ ಆಪರೇಷನ್ ಒಳ್ಳೇದು; ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ ಎಂದ ಶಾಸಕ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸದ್ಯ ಸ್ಟಿಂಗ್ ಆಪರೇಷನ್ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸ್ಟಿಂಗ್ ಆಪರೇಷನ್ ಒಳ್ಳೆಯದು ಎಂದಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ್, ಸ್ಟಿಂಗ್ ಆಪರೇಷನ್‌ ಒಂದು ರೀತಿ ಒಳ್ಳೆಯದು. ಸ್ಟಿಂಗ್ ಆಪರೇಷನ್ ನಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ, ಯಾರು ಎಲ್ಲೂ ಹೋಗದಂತೆ ಮನೆಕಡೆ ಗಮನ ಹರಿಸುತ್ತಾರೆ. ಈ ರೀತಿ ಮಾಡೋದೂ ಒಂದು ತರಹ ಒಳ್ಳೆಯದು ಅನ್ನಿಸುತ್ತೆ ಎಂದಿದ್ದಾರೆ.

ಸ್ಟಿಂಗ್ ಆಪರೇಷನ್ ನೋಡಿದ್ರೆ ನಮಗೂ ಭಯ ಅನಿಸುತ್ತೆ. ಯಾವ ತರ ರಾಜಕಾರಣ ಮಾಡಬೇಕು? ಜನರ ನಡುವೆ ಹೇಗೆ ಇರಬೇಕು? ಅನ್ನೋ ಭಯ ಆಗುತ್ತಿದೆ. ಸ್ಟಿಂಗ್ ಮಾಡೋದು ತಪ್ಪು ಈ ವ್ಯವಸ್ಥೆನ ಸರಿ ಪಡಿಸೋ ಕೆಲಸ ಆಗಬೇಕು ಎಂದರು.

ಸ್ಟಿಂಗ್ ಆಪರೇಷನ್‌ ಮಾಡಿ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ ಅವರೆಲ್ಲ ಈ ರೀತಿ ಸ್ಟಿಂಗ್ ಆಪರೇಷನ್‌ಗೆ ಬಗ್ಗೋ ವ್ಯಕ್ತಿ ಅಲ್ಲ. ಒಪ್ಪಂದದ ಪ್ರಕಾರ ರಾಹುಲ್ ಗಾಂಧಿ ಹೇಳಿದಂತೆ ರಾಜೀನಾಮೆ ಕೊಟ್ಟಿದ್ದಾರೆ. 3-2 ಒಪ್ಪಂದ ಆಗಿರಬಹುದು ಅದಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮೂರು ವರ್ಷದ ನಂತರಾನೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದು ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಆಸ್ತಿ, ಮಾಸ್ ಲೀಡರ್. ಅವರನ್ನ ಡಿಸ್ಟರ್ಬ್ ಮಾಡಲು ವಿರೋಧ ಪಕ್ಷದವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಪರ ನಾನು ಯಾವಾಗಲೂ ನಿಲ್ಲುತ್ತೇನೆ. ಸಿದ್ದರಾಮಯ್ಯ ಸಿಂಹ ಇದ್ದಂತೆ ಯಾವುದೇ ಕಾರಣಕ್ಕೂ ಸ್ಟಿಂಗ್ ಆಪರೇಷನ್‌ಗೆ ಹೆದರಲ್ಲ. ಅವ್ರು ಜೆ.ಎಚ್ ಪಟೇಲ್ ಜೊತೆ ಬೆಳೆದ ವ್ಯಕ್ತಿ. ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆ ಆಗಲಿ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಲಿ. ಈ ರೀತಿಯ ರಾಜಕಾರಣ ಮಾಡಿಕೊಂಡು ಹೋಗಬಾರದು, ಬರ ಇದೆ ಅದರ ಕಡೆ ಎಲ್ಲರೂ ಗಮನ ಕೊಡಬೇಕು ಎಂದು ಹೇಳಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button