
ಪ್ರಗತಿವಾಹಿನಿ ಸುದ್ದಿ: ಜಂಬೂಸವಾರಿ ಮೆರವಣಿಗೆಯಲ್ಲಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ್ದು, ಅಂಬಾರಿ ಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ.
ಈ ಅವಘಡ ಜನರಲ್ಲಿ ಆತಂಕಕ್ಕೆ ಕಾರಣವಗಿದೆ. ಅಲ್ಲದೇ ದಸರಾ ಜಂಬೂಸವಾರಿಯನ್ನೇ ಅರ್ಧಕ್ಕೆ ಮೊಟಕುಗೊಳಿರುವ ಘಟನೆ ನಡೆದಿದೆ. ಆನೆ ಹಿಡಿಯಲು ಮಾವುತರು ಹರಸಾಹಸ ಪಟ್ಟಿದ್ದಾರೆ.
ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಇಂತದ್ದೊಂದು ಭಾರೀ ಅನಾಹುತ ಸಂಭವಿಸಿದೆ. ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ್ದು ಅವಘಡ ಸಂಭವಿಸಿದೆ.
ಶಿವಮೊಗ್ಗದ ದಸರಾ ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿದೆ. ಆನೆ ಮೇಲಿದ್ದ ದೇವಿಯ ಅಂಬಾರಿ ಕೆಳಗೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ.
ಆನೆ ಓಡಾಟದಿಂದ ಬೈಕ್ ಮತ್ತು ಕಾರುಗಳು ಜಖಂಗೊಂಡಿವೆ. ಘಟನೆಯಿಂದಾಗಿ ಜನರು ಗಾಬರಿಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದಸರಾ ಜಂಬೂಸವಾರಿಯನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಜಂಬೂಸವಾರಿಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆಯು ಏಕಾಏಕಿ ದಾರಿ ತಪ್ಪಿ ರೊಚ್ಚಿಗೆದ್ದ ಪರಿಣಾಮ, ದೇವಿಯ ಬೆಳ್ಳಿ ಅಂಬಾರಿಯು ಕೆಳಗೆ ಬಿದ್ದು ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




