CrimeKannada NewsLatestNational

*ಹೆತ್ತ ತಾಯಿಯಿಂದಲೇ ಇಬ್ಬರು ಅವಳಿ ಮಕ್ಕಳ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿದೆ. ಆದರೆ ಈ ಮಾತು ಇಲ್ಲಿ ಸುಳ್ಳಾಗಿದೆ. ಕಾರಣ ಹೆತ್ತ ತಾಯಿಯೇ ತನ್ನ ಅವಳಿ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅವಳಿ ಮಕ್ಕಳನ್ನು ತಾಯಿಯೇ ಹತ್ಯೆ ಮಾಡಿದ್ದಾಳೆ. ವಿನಯ್ ಮತ್ತು ವಿಷ್ಣು ಚೌಧರಿ ಕೊಲೆಯಾದ ಮಕ್ಕಳು. ಕತ್ತು ಸೀಳಿ ಮಕ್ಕಳ ಕೊಲೆ ಮಾಡಲಾಗಿದೆ.

ರಾಜಸ್ಥಾನದ ದೀಗ್ ಜಿಲ್ಲೆಯ ಬದೇಸ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಮುಂಜಾನೆ ಇಬ್ಬರೂ ಮನೆಯಿಂದ ಹೊರಹೋಗಿದ್ದರು. ಎಷ್ಟೊತ್ತಾದರೂ ಇಬ್ಬರು ವಾಪಸ್‌ ಬಾರದಿದ್ದಾಗ, ಚಿಕ್ಕಮ್ಮ ಹುಡುಕಾಟ ನಡೆಸಿದ್ದರು. ಆದರೆ, ಮನೆಯ ಸಮೀಪವಿರುವ ಜಾಗವೊಂದರಲ್ಲಿ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಅವಳಿ ಮಕ್ಕಳ ಕುತ್ತಿಗೆಯನ್ನು ಸೀಳಲಾಗಿತ್ತು. ಅವರ ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು ಡೀಗ್ ಪೊಲೀಸ್ ಅಧೀಕ್ಷಕ ಕಾಂಬಳೆ ಶರಣ್ ಗೋಪಿನಾಥ್ ತಿಳಿಸಿದ್ದಾರೆ.

ಪ್ರೀತಿ ಎಂಬ ಮಹಿಳೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಆಕೆಯ ಸೂಚನೆಯ ಮೇರೆಗೆ, ಲವ್ವರ್‌ ಮತ್ತು ಆಕೆಯ 16 ವರ್ಷದ ಹಿರಿಯ ಮಗ ಸೇರಿ ಈ ಕೊಲೆಗಳನ್ನು ಮಾಡಿದ್ದಾರೆ. ಮೂವರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಆರೋಪಿ ಮಹಿಳೆಯು ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಆಕೆಯ ಇಬ್ಬರು ಅವಳಿ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಆಕೆಯ ಹಿರಿಯ ಮಗ ಮಾತ್ರ ಅಕ್ರಮ ಸಂಬಂಧಕ್ಕೆ ಬೆಂಬಲವಾಗಿದ್ದ. ಇದೇ ಕಾರಣಕ್ಕೆ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button