CrimeKannada NewsKarnataka NewsLatest

*ಟೈಯರ್ ಬ್ಲಾಸ್ಟ್ ಆಗಿ ಟ್ರಕ್ ಪಲ್ಟಿ*: *ನೂರಾರು ಸಿಮೆಂಟ್‌ ಮೂಟೆ ಹೊತ್ತೊಯ್ದ ಜನ*

ಪ್ರಗತಿವಾಹಿನಿ ಸುದ್ದಿ: ಸಿಮೆಂಟ್‌ ಮೂಟೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ಟೈಯರ್‌ ಬ್ಲಾಸ್ಟ್‌ ಆಗಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಟ್ರಕ್‌ ಚಾಲಕ ಗಂಭೀರವಾಗಿ ಗಾಯಗೊಂಡಿದ್ರೆ ಇತ್ತ ಅಪರಿಚಿತರು ರಸ್ತೆ ಮೇಲೆ ಬಿದ್ದಿದ್ದ ನೂರಾರು ಸಿಮೆಂಟ್‌ ಚೀಲಗಳನ್ನು ಹೊತ್ತೊಯ್ದಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ಗುಳಗಳಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಜಾರ್ಖಂಡ್ ಮೂಲದ 30 ವರ್ಷದ ಚಾಲಕ ರಾಜೇಶ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಟ್ರಕ್, ಟೈಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ಬಳಿಕ ಪೊಲೀಸರು ರಸ್ತೆಯಿಂದ ಲಾರಿಯನ್ನು ತೆರವುಗೊಳಿಸಿದ್ದಾರೆ.

ಆದರೆ, ರಸ್ತೆಯ ಮೇಲೆ ಬಿದ್ದಿದ್ದ ಸಿಮೆಂಟ್ ಚೀಲಗಳನ್ನು ತೆಗೆದುಕೊಂಡು ಹೋಗಲು ಯಾರೂ ಬಾರದ ಹಿನ್ನೆಲೆಯಲ್ಲಿ, ರಾತ್ರಿ ವೇಳೆ ಅಪರಿಚಿತರು ಚೀಲಗಳನ್ನು ಹೊತ್ತೊಯ್ದಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಬಂದ ಹತ್ತಾರು ಮಂದಿ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಹೋಗಿರುವ ದೃಶ್ಯ ಕಂಡುಬಂದಿದೆ.

ಅಪಘಾತ ಸಂಭವಿಸಿ ಒಂದು ದಿನ ಕಳೆದರೂ ಸಿಮೆಂಟ್ ಚೀಲಗಳನ್ನು ತೆಗೆದುಕೊಂಡು ಹೋಗಲು ಸಂಬಂಧಪಟ್ಟವರು ಬಾರದ ಹಿನ್ನೆಲೆಯಲ್ಲಿ ಅಪರಿಚಿತರು ಸಿಮೆಂಟ್‌ ಮೂಟೆಗಳನ್ನು ತೆಗೆದುಕೊಂಡಿ ಹೋಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button