Latest

*ಆಟವಾಡುತ್ತಿದ್ದಾಗ ಕುತ್ತಿಗೆಗೆ ಸುತ್ತಿಕೊಂಡ ಹಗ್ಗ: ಬಾಲಕ ಸ್ಥಳದಲ್ಲೇ ಸಾವು*

ಮಕ್ಕಳು ಆಟವಾಡುತ್ತಿದ್ದರೆ ಎಂದು ಪೋಷಕರು ಸ್ವಲ್ಪ ನಿರ್ಲಕ್ಷ ಮಾಡಿದರೂ ಎಂತಹ ಅನಾಹುತ ಮಾಡಿಕೊಳ್ಳುತ್ತಾರೆ ನೋಡಿ. ಮನೆಯಲ್ಲಿ ಆಟವಾಡುವಾಗ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮನೆಯಲ್ಲಿ ರಾತ್ರಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡ ಪರಿಣಾಮ 9 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆನಂದ ಪೂಜಾರಿ ಎಂಬುವರ ಪತ್ರ ಅಮೃತ್ ಎ. ಪೂಜಾರಿ(9) ಮೃತಪಟ್ಟ ಬಾಲಕ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪ ಕೇಂತಲೇ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಬಾಲಕ ಆಟವಾಡುವಾಗ ಮನೆಯ ಕಿಟಕಿಲ್ಲಿ ಸಿಲುಕಿಸಿದ್ದ ಹಗ್ಗ ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸುತ್ತಿಕೊಂಡು ಚೀರಾಡಿದ್ದಾನೆ. ಮನೆಯವರು ಕೂಡಲೇ ಹಗ್ಗದಿಂದ ಬಿಡಿಸಿ ಉಪಚರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತನನ್ನು ಮೂಡುಬಿದರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಬಂಟ್ವಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Mangaluru,boy,death,rope,wrapped,his neck

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button