*ಬಸ್-ಬೈಕ್ ಭೀಕರ ಅಪಘಾತಕ್ಕೆ ಹೊತ್ತಿಕೊಂಡ ಬೆಂಕಿ*: *ಮದುವೆಯಾದ ಐದೇ ದಿನಕ್ಕೆ ನವವಿವಾಹಿತ ಸಾವು*

ಪ್ರಗತಿವಾಹಿನಿ ಸುದ್ದಿ: ಕೆಎಸ್ಆರ್ಟಿಸಿ ಬಸ್ಸು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಸವಾರ ಸಜೀವದಹನವಾಗಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ್ ಮೇಲಿದ್ದ ವ್ಯಕ್ತಿ ಅರ್ಧಂಬರ್ಧ ಸುಟ್ಟುಹೋಗಿ, ಪ್ರಾಣಬಿಟ್ಟಿದ್ದಾನೆ. ಮೃತ ಬೈಕ್ ಸವಾರ ನವವಿವಾಹಿತನಾಗಿದ್ದು, ಕಳೆದ 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಬಳಿ ಅಪಘಾತ ಸಂಭವಿಸಿದೆ.ಜಯಪುರದಿಂದ ಶೃಂಗೇರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ, ಪರಿಣಾಮ ಬೈಕ್ ಸವಾರ, 32 ವರ್ಷದ ನಾಗರಾಜ್ ಸಾವನ್ನಪ್ಪಿದ್ದಾನೆ.
ಮೃತ ನಾಗರಾಜ್ ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ಎನ್ನಲಾಗಿದ್ದು. ದುರ್ದೈವದ ಸಂಗತಿ ಅಂದರೆ ನಾಗರಾಜ್ ನವವಿವಾಹಿತನಾಗಿದ್ದು, ಕೇವಲ 5 ದಿನಗಳ ಹಿಂದಷ್ಟೇ ವಿವಾಹವಾಅಗಿದ್ದರು. ಅಷ್ಟರಲ್ಲೇ ಈ ದುರ್ಘಟನೆ ಸ್ಂಭವಿಸಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



