FoodsKannada NewsKarnataka NewsLatest

*ಇದು ಮಹಾಮೋಸ* *ಹಾಲಿನ ದರ ಹೆಚ್ಚಾಗಿದ್ದು 8 ರೂ. ಅಲ್ಲ, 20ರೂ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಾಲಿನ ದರ 8 ರೂ. ಹೆಚ್ಚಳ ಎನ್ನುವ ಸರಕಾರದ ಹೇಳಿಕೆ ಸಂಪೂರ್ಣ ಬೋಗಸ್ ಎನ್ನುವುದು ಬಯಲಾಗಿದೆ. ಹಾಲಿನ ದರ ಹೆಚ್ಚಳವಾಗಿದ್ದು 8ರಿಂದ 20 ರೂ.!

ಒಂದೊಂದು ರೀತಿಯ ಹಾಲಿನ ದರ ಒಂದೊಂದು ರೀತಿಯಲ್ಲಿ ಹೆಚ್ಚಳವಾಗಿದೆ. ತೋಂಡ್ ಮಿಲ್ಕ್ ಬೆಲೆ 48 ರೂ. ಇದ್ದಿದ್ದು 56 ರೂ. ಆಗಿದ್ದು, 8 ರೂ ಹೆಚ್ಚಳವಾಗಿದೆ. ಆದರೆ ಉಳಿದೆಲ್ಲ ಹಾಲಿನ ದರದಲ್ಲಿ ಭಾರೀ ಹೆಚ್ಚಳವಾಗಿದೆ.ಸ್ಟ್ಯಾಂಡರ್ಡ್ ಮಿಲ್ಕ್ ದರ 54 ರೂ.ಗಳಿಂದ 64 ರೂ.ಗೆ ಹೆಚ್ಚಳವಾಗಿದ್ದು, ಲೀಟರ್ ಗೆಲ 10 ರೂ. ಏರಿಕೆಯಾಗಿದೆ.

ಫುಲ್ ಕ್ರೀಂ ಹಾಲಿನ ಬೆಲೆ 58 ರೂ. ಇದ್ದಿದ್ದು 74 ರೂ. ಆಗಿದ್ದು, 16 ರೂ. ಹೆಚ್ಚಾಗಿದೆ. ಬಫೆಲೋ ಮಿಲ್ಕ್ ದರ 62 ರೂ. ಇದ್ದಿದ್ದು 80 ರೂ. ಆಗಿದ್ದು, 18 ರೂ. ಹೆಚ್ಚಾಗಿದೆ. ಪ್ಪೀಮಿಯಂ ಮಿಲ್ಕ್ ರೇಟ್ 64 ರೂ. ಇದ್ದಿದ್ದು, 84 ರೂ. ಆಗಿದ್ದು, ಲೀಟರ್ ಗೆ 20 ರೂ. ಹೆಚ್ಚಾಗಿದೆ.

ಸರಕಾರ 8 ರೂ ಹೆಚ್ಚಳವೆಂದು ಹೇಳಿದ್ದು, ಅದು ಕನಿಷ್ಟ ಹೆಚ್ಚಳವಾಗಿದೆ. ಆದರೆ ಗರಿಷ್ಟ ಹೆಚ್ಚಳವನ್ನು ಮುಚ್ಚಿಟ್ಟಿದೆ. ಅಂದರೆ ವಿವಿಧ ಬಗೆಯ ಹಾಲಿನ ದರ 8, 10, 16, 18 ಮತ್ತು 20 ರೂ. ಏರಿಕೆಯಾಗಿದೆ.

ವಿಪರ್ಯಾಸವೆಂದರೆ ಹಾಲು ಉತ್ಪಾದಕರಿಗೆ ಲೀಟರ್ ಗೆ 7 ರೂ. ಕೊಡುವುದಾಗಿಯೂ ಕೆಎಂಎಫ್ 1 ರೂ. ಇಟ್ಟುಕೊಳ್ಳುವುದಾಗಿಯೂ ಹೇಳಿದ್ದು, ಎಲ್ಲ ಮಾದರಿಗೂ 7 ರೂ. ಮಾತ್ರ ರೈತರಿಗೆ ಕೊಡುವ ಸಾಧ್ಯತೆ ಇದೆ. ಇತರ ಮಾದರಿಗಳಲ್ಲಿ ಕೆಎಂಎಫ್ ಧಾರಾಳವಾಗಿ ಹಣ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ಮೊಸರಿಗೆ 56 ರೂ. ಇದ್ದಿದ್ದು, 68 ರೂ. ಆಗಿದ್ದು, 12 ರೂ. ಹೆಚ್ಚಳವಾಗಿದೆ.

ಇದು ಹಾಲು ಉತ್ಪಾದಕರಿಗೂ, ಹಾಲು ಗ್ರಾಹಕರಿಗೂ ಇಬ್ಬರಿಗೂ ಮಾಡಿರುವ ಮಹಾಮೋಸವೆಂದೇ ವಿಶ್ಲೇಷಿಸಲಾಗುತ್ತಿದೆ.

Related Articles

Back to top button