Kannada NewsKarnataka NewsLatestPolitics

*ಕುಮಾರಸ್ವಾಮಿ ಲಂಚದ ಆರೋಪಕ್ಕೆ ಡಿಸಿ ಲತಾಕುಮಾರಿ ಖಡಕ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಹಾಸನ ಡಿಸಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿ, ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ತಿರುಗೇಟು ನೀಡಿದ್ದಾರೆ.

ಹೆಚ್‌.ಡಿ ಕುಮಾರಸ್ವಾಮಿ ಅವರ ಆರೋಪ ಎಲ್ಲವೂ ಸಂಪೂರ್ಣ ಸುಳ್ಳು. ಡೇ 1 ನಿಂದಲೂ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ. ನಾವ್‌ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿನೇ ಬಂದಿರ್ತೀವಿ. ಅದಕ್ಕೆ ಟ್ರೈನಿಂಗ್‌ ಕೂಡ ಆಗಿರುತ್ತೆ ಎಂದು ಡಿಸಿ ಲತಾಕುಮಾರಿ ಖಡಕ್‌ ಉತ್ತರ ಕೊಟ್ಟಿದ್ದಾರೆ.

ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ, ಡೇ 1 ನಿಂದ (ಕರ್ತವ್ಯದ ಮೊದಲ ದಿನದಿಂದ) ಇದನ್ನ ಅನುಭವಿಸುತ್ತಲೇ ಬಂದಿದ್ದೇನೆ. ಇನ್ನೂ ಏನೇನು ಆರೋಪಗಳು ಬರುತ್ತವೆಯೋ ಗೊತ್ತಿಲ್ಲ. ಆದ್ರೆ ನಾವ್‌ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿನೇ ಬಂದಿರ್ತೀವಿ. ಅದಕ್ಕೆಲ್ಲ ನಮಗೆ ಟ್ರೈನಿಂಗ್‌ ಆಗಿರುತ್ತೆ. ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು, ಹೆಣ್ಣುಮಕ್ಕಳನ್ನ ತೇಜೋವಧೆ ಮಾಡುವ ಕೆಲಸ ಮಾಡಲಾಗ್ತಿದೆ. ಜನ ಇದನ್ನ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರದ್ದು ಸುಳ್ಳು ಆರೋಪ, ಈ ಬಗ್ಗೆ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಕೊಟ್ಟಿದ್ದೇನೆ. ಎಫ್‌ಐಆರ್‌ ಕೂಡ ಮಾಡಿಸಿದ್ದೇನೆ. ಸುಳ್ಳು ಆರೋಪಗಳಿಗೆ ಏನ್‌ ಉತ್ತರ ಕೊಡೋಕಾಗುತ್ತೆ. ಅಲ್ಲದೇ ಈ ರೀತಿ ಹಿರಿಯರು ಸುಳ್ಳು ಆರೋಪ ಮಾಡಿದ್ರೆ, ಯಾವ ರೀತಿ ಕ್ರಮ ತಗೋಬೇಕು‌ ಅಂತಾ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ, ಅವರಿಗೆ ಪತ್ರ ಬರೆಯುತ್ತೇನೆ. ಜೊತೆಗೆ ಪಿಡಿಎಫ್‌ ಯಾರು ಬಿಡುಗಡೆ ಮಾಡಿದ್ರು, ಅವರ ವಿರುದ್ಧ ಕ್ರಮ ತಗೋತೇವೆ. ಕೆಲಸ ಮಾಡೋದು ಬಿಟ್ಟು ಯಾಕೆ ಹೀಗೆ ಅಧಿಕಾರಿಗಳಿಗೆ ಹಿಂಸೆ ಮಾಡ್ತಿದ್ದಾರೆ ಅಂತಾ ಪ್ರಶ್ನೆ ಮಾಡಿದ್ದಾರೆ.

ಬೆಳಿಗ್ಗೆ ಹಾಸನದ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು. ಇದೇ ವೇಳೆ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಪ್ ಚಾಟ್ ಬಿಡುಗಡೆ ಮಾಡಿದ್ದರು.

Related Articles

Back to top button