Belagavi NewsBelgaum NewsKannada NewsKarnataka News

*ನ.22ರಂದು ಬೆಳಗಾವಿ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವತಿಯಿಂದ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 22ರಂದು ಬೆಳಗಾವಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ 110/11 ಕೆ.ವಿ. ಉದ್ಯಮಬಾಗ ಉಪಕೇಂದ್ರ ಹಾಗೂ 33/11 ಕೆ.ವಿ. ಆರ್‌ಎಂ-1 ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಉದ್ಯಮಬಾಗ, ಚೆಂಬರ್ ಆಫ್ ಕಾಮರ್ಸ್, ಮಂಗಲ ಫೌಂಡ್ರಿ, ಗುರುಪ್ರಸಾದ ಕಾಲೋನಿ, ಅಶೋಕ ಐರನ್ ಇಂಡಸ್ಟ್ರೀಸ್, ಅರುಣ ಇಂಜಿನಿಯರಿಂಗ್, ಎ.ಕೆ.ಪಿ., ಗೆಲಾಕ್ಸಿ, ಜೆ.ಐ.ಟಿ., ಶಾಂತಿ ಐರನ್, ಜೈತನ ಮಾಳ, ಭವಾನಿ ನಗರ, ಜೈನ್ ಇಂಜಿನಿಯರಿಂಗ್, ರಾಣಿ ಚನ್ನಮ್ಮ ನಗರ, ಬುಡಾ ಲೇಔಟ್, ಸುಭಾಷ್‌ಚಂದ್ರ ನಗರ, ಉತ್ಸವ್ ಹೋಟೆಲ್, ಮೂರನೇ ರೈಲ್ವೆ ಗೇಟ್, ವಸಂತ ವಿಹಾರ ಕಾಲೋನಿ, ಉದ್ಯಮಬಾಗ ಪೊಲೀಸ್ ಠಾಣೆ, ಅನಗೋಳ, ಲಕ್ಷ್ಮೀ ನಗರ, ರಾಜಾರಾಮ ನಗರ, ಮಹಾವೀರ ನಗರ, ಖಾನಾಪುರ ಮುಖ್ಯ ರಸ್ತೆ, ಪಾಟೀಲ ಮಾಳ, ನರಸಗೌಡ ಲೇಔಟ್, ಗುರುಪ್ರಸಾದ ನಗರ, ಕಾವೇರಿ ಕಾಲೋನಿ, ಆರ್.ಸಿ. ನಗರ, ಪಾರ್ವತಿ ನಗರ, ರಾಜೀವ್‌ಗಾಂಧಿ ನಗರ, ಅಯೋಧ್ಯ ನಗರ, ಭವಾನಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆರ್‌ಎಂ-1 ಉಪಕೇಂದ್ರದ ವ್ಯಾಪ್ತಿಯಲ್ಲಿ:

ಉದ್ಯಮಬಾಗ, ಆರ್‌ಪಿಡಿ, ಕೆಎಲ್‌ಇ, ಮಜಗಾವಿ, ಹುಲಿಯಾರ, ಫಡಕೆ, ಗಾವಡೆ ಲೇಔಟ್, ಬಡಮಂಜಿಮಾಳ, ಇಂದಿರಾ ನಗರ, ಬಾಬಲೆ ಗಲ್ಲಿ, ಅನಗೋಳ, ನಾಥಪೈ ನಗರ, ಶಿವಶಕ್ತಿ ನಗರ, ರಘುನಾಥ ಪೇಟೆ, ಚಿದಂಬರ ನಗರ, ಮೃತ್ಯುಂಜಯ ನಗರ, ಖಾನಾಪುರ ರಸ್ತೆ, ಎರಡನೇ ರೈಲ್ವೆ ಗೇಟ್, ಆರ್‌ಪಿಡಿ ಕ್ರಾಸ್, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಟೈನಿ ಇಂಡಸ್ಟ್ರಿಯಲ್ ಏರಿಯಾ, ಸಂತ ರೋಹಿದಾಸ್ ನಗರ, ಮಹಾಲಕ್ಷ್ಮೀ ಕಂಪೌಂಡ್, ಮಜಗಾವಿ ನಗರ, ಕಾಳೇಶ್ವರ ನಗರ, ಬ್ರಹ್ಮನಗರ, ಪಲ್ಲಕ್ಕಿ ರಸ್ತೆ, ಲೇಬರ್ ಆಫೀಸ್, ಐಟಿಐ, ಸರ್ಕಾರಿ ಮಹಿಳಾ ಕಾಲೇಜು, ಸಂತ ಜ್ಞಾನೇಶ್ವರ ನಗರ, ರೌತ್ ಲೇಔಟ್, ಜಿಟಿಟಿಸಿ ಕಾಲೇಜು, ಜೈ ಹಿಂದ್, ರೇಣುಕಾ ಮೆಟಲ್, ಆಕ್ವಾ ವರ್ಲ್ಡ್, ಮಂಜುನಾಥ ಕ್ಯಾಂಟೀನ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button