Belagavi NewsBelgaum NewsKannada NewsKarnataka NewsLatest

*ಸುಳೇಭಾವಿಯಲ್ಲಿ ನೂತನ ‘ಬನಶ್ರೀ ಭವನ’ ಉದ್ಘಾಟನೆ*; *ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ*

ಪ್ರಗತಿವಾಹಿನಿ ಸುದ್ದಿ: ಸುಳೇಭಾವಿ: ಗ್ರಾಮದ ಶ್ರೀ ಶಾಕಾಂಭರಿ ದೇವಸ್ಥಾನದ ಆವರಣದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ‘ಬನಶ್ರೀ ಭವನ’ ವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.

ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಿರುವ ಈ ನೂತನ ಭವನವು ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ಹಾಗೂ ದೇವಸ್ಥಾನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ನೆರವಾಗಲಿದೆ. ಸುಸಜ್ಜಿತ ಭವನ ನಿರ್ಮಾಣದಿಂದ ಗ್ರಾಮದಲ್ಲಿ ಧಾರ್ಮಿಕ ಸಮಾರಂಭಗಳು, ಸಭೆ-ಸಮಾರಂಭಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ತಮ ಸ್ಥಳಾವಕಾಶ ದೊರಕಿದಂತಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.


ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮೂಲಸೌಕರ್ಯಗಳ ನಿರ್ಮಾಣವು ಸಮುದಾಯದ ಒಗ್ಗಟ್ಟು, ಸಾಮಾಜಿಕ ಚಟುವಟಿಕೆಗಳು ಹಾಗೂ ಧಾರ್ಮಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬನಶ್ರೀ ಭವನ ಗ್ರಾಮಸ್ಥರ ಬಹುದಿನಗಳ ಅಗತ್ಯಕ್ಕೆ ಪೂರಕವಾಗಿದ್ದು, ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಕೊಡುಗೆಯಾಗಿದೆ ಎಂದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ದತ್ತಾ ಬಂಡಿಗಣಿ, ಲಕ್ಷ್ಮೀನಾರಾಯಣ ಕಲ್ಲೂರ್, ಮಹೇಶ ಸುಳೇಭಾವಿ, ಶಿವಲಿಂಗಪ್ಪ ಇಂಗಳೆ, ನಾರಾಯಣ ಹೊಸಕೋಟಿ, ಕಲ್ಲಪ್ಪ ಕಣಬರಗಿ, ಮನೋಹರ್ ಇಂಗಳೆ, ಲಕ್ಷ್ಮಣ ಬಕರಿ, ಮಹಾದೇವ್ ರಾಗಿ, ಗೋಪಾಲ ಪಿಟಗಿ, ಶ್ರೀಧರ್ ಕರೇಮನಿ, ಬಸವರಾಜ ಗೋಕಾವಿ, ರಮೇಶ್ ಹೊಸಕೋಟಿ, ಬಸವರಾಜ ಹುಲಮನಿ, ಉದಯ ವಠಾರಿ, ಬಸವರಾಜ ಇಂಗಳೆ, ವೀರಭದ್ರ ನೇಸರಗಿ, ಶಂಕರ ಇಂಗಳೆ ಹಾಗೂ ಬಾಬು ವಾಗೇರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button