
ಪ್ರಗತಿವಾಹಿನಿ ಸುದ್ದಿ: ತಿಂಡಿ, ತಿನಿಸು ಖರೀದಿಸಿದರೆ, ತರಕಾರಿ, ಹಾಲು-ಮೊಸರು ಖರೀದಿ ಹೀಗೆ ಸಣ್ಣಪುಟ್ಟ ಖರೀದಿಗಳಿಗೆ UPI ಮೂಲಕ ಹಣ ಪಾವತಿಸಿದರೆ ಹಲವರು ಮೊಬೈಲ್ ಗೆ ಬರುವ SMS ಬಗ್ಗೆ ಗಮನ ಹರಿಸುತ್ತಾರೆ. ಹಣ ಪಾವತಿ ಯಶ್ವಿಯಾಯ್ತಾ? ಹಣ ಕಟ್ ಆಗಿದೆಯೇ ಎಂಬುದನ್ನು ಪರಿಶೀಲಿಸಿಸಿಕೊಂಡರೇ ಕೆಲವರಿಗೆ ನಿರಾಳ. ಆದರೆ ಇನ್ಮುಂದೆ ಇಮ್ತಹ SMS ಗಳು ಬಂದ್ ಆಗಲಿವೆ.
ಕೆಲ ಬ್ಯಾಂಕ್ ನಿಯಮಗಳ ಪ್ರಕಾರಣ ಜನವರಿ 1ರಿಂದ ಸಣ್ಣ-ಪುಟ್ಟ ಖರೀದಿಗಳಿಗೆ ಎಸ್ ಎಂ ಎಸ್ ಬರುವುದಿಲ್ಲ ಎನ್ನಲಾಗಿದೆ. HDFC ಬ್ಯಾಂಕ್ ಗ್ರಾಹಕರಿಗೆ 2027ರ ಜನವರಿ 1ರಿಂದ ಹೊಸ ಬದಲಾವಣೆಯೊಂದು ಜಾರಿಗೆ ಬರಲಿದೆ ಎನ್ನಲಾಗಿದೆ.
₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ವಹಿವಾಟುಗಳಿಗೆ ಬ್ಯಾಂಕ್ SMS ಅಲರ್ಟ್ ಕಳುಹಿಸುವುದನ್ನು ನಿಲ್ಲಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇನ್ಮುಂದೆ ಸಣ್ಣ ಮೊತ್ತದ ಪಾವತಿ ಮಾಡಿದಾಗ ಮೊಬೈಲ್ಗೆ ಬ್ಯಾಂಕ್ನಿಂದ SMS ಬಾರದಿರಬಹುದು. ಆದರೆ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ, ಬದಲಾಗುವುದು ಕೇವಲ ವಹಿವಾಟಿನ ಮಾಹಿತಿ ಪಡೆಯುವ ವಿಧಾನವಷ್ಟೇ. ಖಾತೆಯಲ್ಲಿರುವ ಹಣಕ್ಕೆ ತೊಂದರೆಯಿಲ್ಲ.
HDFC ಬ್ಯಾಂಕ್ನ ಅಧಿಸೂಚನೆಯ ಪ್ರಕಾರ, 2027ರ ಜನವರಿ 1ರಿಂದ ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ವಹಿವಾಟುಗಳಿಗೆ ಸಾಮಾನ್ಯ SMS ಅಲರ್ಟ್ಗಳು ಬರುವುದಿಲ್ಲ.ಅಂದರೆ ನೀವು ₹50, ₹100, ₹200 ಅಥವಾ ₹500 ಪಾವತಿ ಮಾಡಿದರೂ ಬ್ಯಾಂಕ್ನಿಂದ SMS ಬರದೇ ಇರಬಹುದು. ಆದರೆ ₹500ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ SMS ಅಲರ್ಟ್ಗಳು ಎಂದಿನಂತೆ ಮುಂದುವರಿಯಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಮಾರ್ಗಸೂಚಿಗಳ ಪ್ರಕಾರ, 2027ರ ಜನವರಿ 1ರಿಂದ ₹500ಕ್ಕಿಂತ ಹೆಚ್ಚಿನ ಮೊತ್ತದ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೆ ಬ್ಯಾಂಕ್ಗಳು ತಕ್ಷಣ SMS ಅಲರ್ಟ್ ಕಳುಹಿಸುವುದು ಕಡ್ಡಾಯವಾಗಿದೆ.
ಆದರೆ ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ವಹಿವಾಟುಗಳಿಗೆ SMS ಕಳುಹಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಬ್ಯಾಂಕ್ಗಳಿಗೇ ಬಿಡಲಾಗಿದೆ. ಬ್ಯಾಂಕ್ಗಳು SMS ಕಳುಹಿಸಿದರೆ ಅದಕ್ಕಾಗಿ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ.ಈ ನಿಯಮ ಕೇವಲ UPI ಪಾವತಿಗಳಿಗೆ ಮಾತ್ರವಲ್ಲದೆ ಇತರ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೂ ಅನ್ವಯಿಸುತ್ತದೆ.
ಸಣ್ಣ ಮೊತ್ತದ UPI ಪಾವತಿಗಳಿಗೆ SMS ಬರುವುದಿಲ್ಲ ಎಂಬ ಕಾರಣಕ್ಕೆ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. HDFC ಬ್ಯಾಂಕ್ ಎಲ್ಲಾ UPI ವಹಿವಾಟುಗಳಿಗೂ ಇಮೇಲ್ ಅಲರ್ಟ್ಗಳನ್ನು ಮುಂದುವರಿಸಲಿದೆ ಎಂಬ ಮಾಹಿತಿ ಇದೆ.
ಅಂದರೆ ₹50 ಅಥವಾ ₹100 ಪಾವತಿ ಮಾಡಿದರೂ ನಿಮ್ಮ ಬ್ಯಾಂಕ್ ಖಾತೆಗೆ ನೋಂದಾಯಿಸಿರುವ ಇಮೇಲ್ ವಿಳಾಸಕ್ಕೆ ವಹಿವಾಟಿನ ವಿವರಗಳು ಲಭ್ಯವಾಗಲಿವೆ. ಬ್ಯಾಂಕ್ನ ವ್ಯವಸ್ಥೆಯನ್ನು ಅವಲಂಬಿಸಿ ಮೊಬೈಲ್ ಆ್ಯಪ್ ಹಾಗೂ ಪುಷ್ ನೋಟಿಫಿಕೇಶನ್ಗಳ ಮೂಲಕವೂ ಮಾಹಿತಿ ಸಿಗಬಹುದು.
ಗ್ರಾಹಕರು ಏನು ಮಾಡಬೇಕು?
ಜನವರಿ 1ರಿಂದ ಅನಗತ್ಯ ಗೊಂದಲ ಉಂಟಾಗದಂತೆ HDFC ಬ್ಯಾಂಕ್ ಗ್ರಾಹಕರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಪರಿಶೀಲಿಸಿ.
ನೋಂದಾಯಿತ ಇಮೇಲ್ ವಿಳಾಸ ಸಕ್ರಿಯವಾಗಿದೆಯೇ ಖಚಿತಪಡಿಸಿಕೊಳ್ಳಿ.
ಬ್ಯಾಂಕ್ ಮೊಬೈಲ್ ಆ್ಯಪ್ನಲ್ಲಿ ವಹಿವಾಟಿನ ನೋಟಿಫಿಕೇಶನ್ಗಳನ್ನು ಸಕ್ರಿಯಗೊಳಿಸಿ.
UPI ಪಾವತಿ ಮಾಡಿದ ಬಳಿಕ ಆ್ಯಪ್ನಲ್ಲಿರುವ ವಹಿವಾಟಿನ ಇತಿಹಾಸವನ್ನೂ ಪರಿಶೀಲಿಸಿ.
ಜನವರಿ 1ರಿಂದ ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ಪಾವತಿಗಳಿಗೆ SMS ಬಾರದಿದ್ದರೂ ನಿಮ್ಮ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಪಾವತಿಗಳು ಎಂದಿನಂತೆ ನಡೆಯಲಿವೆ.



