Kannada NewsKarnataka NewsLatest

ಮಾ.22ರಂದು ನಿಪ್ಪಾಣಿ ಸಾಹಿತ್ಯ ಸಮ್ಮೇಳನ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿ ತಾಲ್ಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಇದೆ ಮಾರ್ಚ್ ೨೨ ರಂದು ಎರ್ಪಡಿಲಾಗುವುದೆಂದು ಖ್ಯಾತ ಸಾಹಿತಿ ಪ್ರೋ ಹಂಜಿ ತಿಳಿಸಿದರು.
ಇಂದು ದಾನಮ್ಮ ದೇವಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಈಗಾಗಲೇ ಎರಡನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಆಯ್ಕೆಯಾದ  ಬೇಡಕಿಹಾಳದ ಹಿರಿಯ ಸಾಹಿತಿ ಪ್ರೊ.ಶಾಂತಿನಾಥ ಲಗಾರೆ ಅವರನ್ನು ಬೋರಗಾಂವ ಸ್ವಗೃಹದಲ್ಲಿ ನಿಪ್ಪಾಣಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಗ ಭೇಟಿಯಾಗಿ ಗೌರವಿಸಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಿದೆ.
ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಬಗ್ಗೆ  ವಿವಿಧ ಸಮಿತಿಗಳನ್ನು ನೇಮಕ ಮಾಡಲಾಯಿತು.
ಪೂರ್ವಭಾವಿ ಸಭೆಯಲ್ಲಿ ಖ್ಯಾತ ಸಾಹಿತಿ  ಪ್ರೋ ಹಂಜಿ. ಬಿ ಆರ್ ಪಾಟೀಲ, ಡಾ.ಸಿ ಬಿ ಕುರಬೇಟಿ, ನಗರಪಾಲಿಕೆ ಪೌರಾಯುಕ್ತ ಮಹಾವೀರ ಬೊರಾಣ್ಣವರ, ಪೊಲೀಸ್ ಇಲಾಖೆಯ  ಕುಮಾರ ಹಾಡಕರ ಹಾಗೂ ಸುಬ್ಬಾಪೂರಮಠ, ಕರವೆ ತಾಲೂಕ  ಅಧ್ಯಕ್ಷ  ಕಪೀಲ ಕಮತೆ, ಸುರೇಶ ಶೆಟ್ಟಿ, ಕ.ಸಾ.ಪ ಅಧ್ಯಕ್ಷೆ  ವಿದ್ಯಾವತಿ ಜನವಾಡೆ, ಕಾಯ೯ದಶಿ೯ ಮಿಥುನ ಅಂಕಲಿ,  ಈರಣ್ಣಾ ಶಿರಗಾಂವಿ, ಕೋಶಾಧ್ಯಕ್ಷ  ಶಿವಾನಂದ ಪುರಾಣಿಕಮಠ, ಸಂಘಟನಾ ಸದಸ್ಯ ಮಾರುತಿ ಕೊಣ್ಣುರಿ, ಪ್ರಶಾಂತ್ ರಾಮನಕಟ್ಟಿ, ರಾವಸಾಬ ಜನವಾಡೆ, ಪಪ್ಪು ಅರಬಳ್ಳಿ, ವಿಶ್ವನಾಥ ಹಲಗೆ,
ಗೌತಮ ಜಾಧವ,  ಜ್ಯೋತಿ ಖಾನಾಪುರೆ, ಉಜ್ವಲಾ ಕೊಳಕಿ, ಶಿವಾನಂದ ವಸೆದಾರ, ಸಿ.ಆರ್.ಸಿ ವಾಕಪಟೆ, ಮಾಳಿ ಸರ್, ದೇಶಮುಖ, ಗುಳಾಸಾವಂತ , ಪಾಟೀಲ, ಕೋಳಿ, ವಿನೋದಿನಿ ಅಲಾಸೆ, ಜೋಶಿ, ಹರಗಾಪೂರೆ  ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button