ಕೆಮಿಕಲ್ ಸ್ಫೋಟಕ್ಕೆ ವ್ಯಕ್ತಿಯ ಕಾಲು ತುಂಡು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡುಗೋಡಿಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯೋರ್ವರ ಕಾಲು ತುಂಡಾದ ಘಟನೆ ನಡೆದಿದೆ.

ಆಡುಗೋಡಿಯ ಚಂದಾಪುರದ ಬಳಿ ರಸ್ತೆ ಪಕ್ಕದ ಕಸದ ರಾಶಿಯಲ್ಲಿ ವಸ್ತುವೊಂದು ಸ್ಫೋಟಗೊಂಡಿದೆ. ಘಟನೆಯಲ್ಲಿ ನರಸಿಂಹಯ್ಯ ಎಂಬ ವ್ಯಕ್ತಿಯ ಎಡಗಾಲು ತುಂಡಾಗಿದೆ. ಗಾಯಗೊಂಡಿರುವ ನರಸಿಂಹಯ್ಯರನ್ನು ಸಂಜಯ್‌ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್‌ ಜೋಷಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Home add -Advt

ಗ್ರಾನೈಟ್‌ ಕೆಲಸಕ್ಕೆ ಬಳಸುವ ಕೆಮಿಕಲ್‌ ಕ್ಯಾನ್ ಸ್ಫೋಟಗೊಂಡ ಪರಿಣಾಮ ಈ ಘಟನೆ ನಡೆದಿದೆ. ಬಿಸಿಲಿನ ತಾಪಕ್ಕೆ ಕಸದ ರಾಶಿಯಲ್ಲಿದ್ದ ರಾಸಾಯನಿಕ ತುಂಬಿದ್ದ ಕ್ಯಾನ್ ಕೆಮಿಕಲ್‌ ರಿಯಾಕ್ಷನ್‌ ಗೊಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

Back to top button