ಗ್ರೀಸ್ ಗೆ ಹನಿಮೂನ್ ಗೆ​ ಹೋಗಿ ಬಂದಿದ್ದ ಟೆಕ್ಕಿ ಪತ್ನಿಗೂ ಕೊರೊನಾ ದೃಢ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗ್ರೀಸ್​​ಗೆ ಹನಿಮೂನ್​ ಹೋಗಿಬಂದಿದ್ದ ಬೆಂಗಳೂರು ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದೀಗ ಅವರ ಪತ್ನಿಗೂ ಕೊರೋನಾ ದೃಢವಾಗಿದೆ. ಟೆಕ್ಕಿ ರಾಜೀವ್​ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪತ್ನಿ ಆಗ್ರಾದಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ.

ಪತಿಗೆ ಕೊರೊನಾ ಲಕ್ಷಣ ಕಾಣಿಸುತ್ತಿದ್ದಂತೆ ಪತ್ನಿ ತವರಿಗೆ ಹೋಗಿದ್ದರು. ಸದ್ಯ ಈ ಮಹಿಳೆ 8 ಜನ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಬಂದಾಗ ಕುಟುಂಬದವರು ಐಸೋಲೇಷನ್​ ವಾರ್ಡ್​ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ್ದರು. ಈಗ ಆಗ್ರಾ ಡಿಸಿ ಆದೇಶದಂತೆ ಕುಟುಂಬಸ್ಥರ ಸಮೇತ ಐಸೋಲೇಷನ್​ ವಾರ್ಡ್​​​ಗೆ ಶಿಫ್ಟ್​ ಮಾಡಲಾಗಿದೆ. ಲ್ಯಾಬ್​​ ರಿಪೋರ್ಟ್​​ನಲ್ಲಿ ಪತ್ನಿಗೂ ಕೊರೊನಾ ವೈರಸ್​ ಇರುವುದು ದೃಢ ಪಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button