ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಇಡೀ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರೆಗೆ ರಾಹುಲ್ ಗಾಂಧಿಯವರೇ ಓಗೊಟ್ಟು ಚಪ್ಪಾಳೆ ತಟ್ಟಿದ್ದಾರೆ. ಸಾಧ್ಯವಾದರೆ ಕೊರೋನಾ ವಿರುದ್ಧ ಹೋರಾಡಲು ಸಹಕಾರಿಯಾಗಬೇಕೇ ಹೊರತು ರಾಜಕಾರಣ ಮಾಡಲು ಇದು ಸಕಾಲವಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಮಾನವ ಕುಲ ಉಳಿಸೋಕೆ ಸಹಾಯ ಮಾಡಬೇಕು. ಹಲವರು ಸಾವಿರಾರು ಕೋಟಿ ಹಣವನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಕೊರೋನಾದಿಂದ ದೇಶ ಮತ್ತು ಜನರನ್ನು ಪಾರು ಮಾಡಲು ವೈದ್ಯರು ಮತ್ತು ದಾದಿಯರು ಹೋರಾಡುತ್ತಿದ್ದಾರೆ. ಈಗ ನಾವು ಇವರನ್ನು ಸ್ಮರಿಸಬೇಕೇ ಹೊರತು ಈ ಸಂದರ್ಭದಲ್ಲೂ ರಾಜಕೀಯ ಮಾಡಬಾರದು ಎಂದು ಆರ್ ಬಿ ತಿಮ್ಮಾಪುರೆ ಹೇಳಿಕೆಗೆ ತಿರುಗೇಟು ನೀಡಿದರು.
ಇನ್ನು, ಬಾಗಲಕೋಟೆಯಲ್ಲಿ 8 ಮಂದಿಗೆ ಸೋಂಕು ಬಂದಿದೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದು, 7 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ