Latest

ಸಂಗೊಳ್ಳಿ ರಾಯಣ್ಣ ಉತ್ಸವ ರಾಜ್ಯದ ಆಕರ್ಷಣೆಯಾಗಲಿ-ಜಾರಕಿಹೊಳಿ

ಸಂಗೊಳ್ಳಿ ರಾಯಣ್ಣ ಉತ್ಸವದ ಸಮಾರೋಪ ಸಮಾರಂಭ

   ಪ್ರಗತಿವಾಹಿನಿ ಸುದ್ದಿ, ಸಂಗೊಳ್ಳಿ
ಸಂಗೊಳ್ಳಿ ರಾಯಣ್ಣ ಉತ್ಸವವು ನಮಗೆ ಹೆಮ್ಮೆಯ ವಿಷಯವಾಗಿದ್ದು, ಇದು ರಾಜ್ಯದ ಆಕರ್ಷಣೆಯಾಗಬೇಕು ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ಸಂಗೊಳ್ಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಉತ್ಸವವು ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ಸಂಗೊಳ್ಳಿ ರಾಯಣ್ಣನವರ ವಿಚಾರಗಳು, ಅವರ ಶೌರ್ಯ, ತ್ಯಾಗವನ್ನು ಇಂದಿನ ಸಮಾಜಕ್ಕೆ ಪರಿಚಯ ಮಾಡುವುದು ಉತ್ಸವದ ಮುಖ್ಯ ಉದ್ದೇಶ ಎಂದು ಹೇಳಿದರು.
ಸಂಗೊಳ್ಳಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನಾಡಿದ ಸಾಹಿತಿ ನಿಕೇತ್ ರಾಜ್ ಅವರು, ಸಂಗೊಳ್ಳಿ ರಾಯಣ್ಣನ ಸ್ವಾಮಿನಿಷ್ಠೆ ಹಾಗೂ ಛಲ ಈಗಿನ ಯುವ ಪೀಳಿಗೆಗೆ ಮಾದರಿಯಾಗಬೇಕಲ್ಲದೆ ಅವರನ್ನು ಸದಾಕಾಲ ನೆನಪಿಸಿಕೊಳ್ಳುವಂತೆ ಮಕ್ಕಳಿಗೆ ಅವರ ಹೆಸರನ್ನು ಇಡಬೇಕು ಎಂದು ಅವರು ಹೇಳಿದರು.
ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಈ ವೇದಿಕೆಯ ಮೂಲಕ ತಿಳಿಸುವುದರೊಂದಿಗೆ ಈ ನಾಡಿನ ವೀರ, ಶೂರರ ಇತಿಹಾಸವನ್ನು ಮೇಲಕು ಹಾಕುವ ಮೂಲಕ ಮತ್ತೆ ಅವರನ್ನು ನೆನಪಿಸುವ ಕಾರ್ಯಕ್ರಮವು ಇದಾಗಿದೆ ಎಂದು  ಹೇಳಿದರು.
ಶಾಸಕ ಮಹಾಂತೇಶ ಕೌಜಲಗಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. 
ಸಮಾರಂಭದಲ್ಲಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು, ಸಂಗೊಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
 ನಂತರ ಅನೇಕ   ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button