Kannada NewsKarnataka NewsLatest

ಜಿಲ್ಲೆಯಲ್ಲಿ 530 ಅಬಕಾರಿ ದಾಳಿ: 63 ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ
ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ.
 ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 530 ದಾಳಿಗಳನ್ನು ನಡೆಸಿ, 63 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 34 ಆರೋಪಿಗಳನ್ನು ಬಂಧಿಸಿ 4662,695 ಲೀಟರ್‌ ಮದ್ಯ, 27 ಅಟರ್ ಗೋವಾ ಮದ್ಯ, 10.170 ಲೀಟರ್ ಮಹಾರಾಷ್ಟ್ರ ಮದ್ಯ, 1207.200 ಲೀಟರ್ ಚೀಯರ್, 40 ಲೀಟರ್ ಸೇಂಧಿ, 50 ಲೀಟರ್ ಬೆಲ್ಲದ ಕೊಳೆ, 33. 530 ಸಂತ್ರಾ, 74ಅ ಕಾಲು, 1014.900 ಅ ಕಳ್ಳಭಟ್ಟಿ ಸಾರಾಯಿಯನ್ನು ಹಾಗೂ 7,400 ( ಒಟ್ಟು 51 ವಾಹನಗಳ ಅಂದಾಜು ಮೌಲ್ಯ 21 ಲಕ್ಷ ) ಜಪ್ತಿ ಮಾಡಲಾಗಿರುತ್ತದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದ್ಯ, ಬೀಯರ್ ಹಾಗೂ ಇತರೆ ಅಂದಾಜು ಮೌಲ್ಯ ರೂ. 50 ಲಕ್ಷಗಳು ಆಗುತ್ತದೆ (ಒಟ್ಟು ರೂ. 71 ಲಕ್ಷಗಳು),
 ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಒಟ್ಟು 12,227 ಲೀಟರ್ ಸಾನಿಟೈಜರ್‌ನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button