ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಾಕಡೌನ್ ನಡುವೆಯೂ ಕೆಎಲ್ಇ ಸಂಸ್ಥೆಯ ಯಳ್ಳೂರು ಆಸ್ಪತ್ರೆ ಎಂದಿನಂತೆ ಕಾರ್ಯುನಿರ್ವಹಿಸುತ್ತಿದ್ದು, ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಘಂಟೆಯವರೆಗೆ ಹೊರರೋಗ ವಿಭಾಗಗಳು ಹಾಗೂ ಔಷಧಾಲಯ ಸೇವೆ ಲಭ್ಯವಿದೆ.
ತುರ್ತುಸೇವೆಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ತುರ್ತು ಹಾಗೂ ಎಲ್ಲ ತರಹದ ಶಸ್ತ್ರಚಿಕಿತ್ಸಾ ಸೇವೆಯು ಲಭ್ಯವಿದೆ. ಆಸ್ಪತ್ರೆಗೆ ಬರುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ರೋಗಿಯ ಜೊತೆ ಒಬ್ಬ ಸಂಬಂಧಿಕರು ಮಾತ್ರ ಆಸ್ಪತ್ರೆಗೆ ಬರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಬೇಕು ಎಂದು ಸೂಚಿಸಲಾಗಿದೆ.
ಕೂವಿಡ್-19 ಗೋಸ್ಕರ ಈ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಮೀಪ, ಫ್ಲೂ ಕ್ಲಿನಿಕ್/ ಜ್ವರ ಕ್ಲಿನಿಕನ್ನೂ ಪ್ರಾರಂಭಿಸಲಾಗಿದೆ, ಕಾರಣ ಎಲ್ಲ ರೋಗಿಗಳು ಸರಿಯಾದ ತಮ್ಮ ಇತಿಹಾಸವನ್ನು ತಿಳಿಸಬೇಕು. ಅಧಿಕ ಮಾಹಿತಿಗಾಗಿ ಫೋ: ೯೯೬೪೨೮೮೭೬೫, ೯೫೩೮೭೦೧೪೩೭ ಸಂಪರ್ಕಿಸಬೇಕು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ